fbpx
ಸಮಾಚಾರ

ಊಟ ಕೇಳಿಬಂದ ಬಡ ಮಕ್ಕಳಿಗೆ ಸಹಾಯ ಮಾಡಲಿಲ್ಲ ರಶ್ಮಿಕಾ: ”ಹಣವಿಲ್ಲ” ಎಂದ ಕಿರಿಕ್ ಹುಡುಗಿಗೆ ನೆಟ್ಟಿಗರ ತರಾಟೆ

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು ರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು. ಕನ್ನಡವೂ ಸೇರಿದಂತೆ ಕಾಲಿವುಡ್ಡು, ಟಾಲಿವುಡ್ಡುಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

ಹೊಸ ಹೊಸ ಆಫರ್ ಗಳನ್ನು ಪಡೆಯುವ ಜತೆಗೆ ಒಂದಿಲ್ಲೊಂದು ಗಾಸಿಪ್ಪು, ಕಾಂಟ್ರೊವರ್ಸಿಗಳಿಂದ ಸೌಂಡು ಮಾಡುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚಿಗೆ ಬಡ ಮಕ್ಕಳ ಜೊತೆ ನಡೆದುಕೊಂಡಿರುವ ರೀತಿಗೆ ನೆಟ್ಟಿಗರು ಗರಂ ಆಗಿದ್ದಾರೆ.

 

 

ಮುಂಬೈ ನಲ್ಲಿ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರನ್ನು ಭೇಟಿ ಮಾಡಿದ ರಶ್ಮಿಕಾ ಹೊರಗೆ ಬಂದಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ನೋಡಲು ಮಕ್ಕಳು ಕಾದುನಿಂತಿದ್ದರು. ರಶ್ಮಿಕಾ ಹೊರಗಡೆ ಬರುವ ವೇಳೆ, ಕೆಲ ಮಕ್ಕಳು ರಶ್ಮಿಕಾ ಬಳಿ ಬಂದು ಆಹಾರಕ್ಕಾಗಿ ಹಣವನ್ನು ಕೇಳಿದ್ದಾರೆ. ಆಗ ರಶ್ಮಿಕಾ ನನ್ನ ಬಳಿ ಹಣವಿಲ್ಲ ಅಂತ ಹೇಳಿ ಅವರನ್ನು ನಿರ್ಲಕ್ಷಿಸಿ ತಮ್ಮ ಕಾರು ಹತ್ತಿದ್ದಾರೆ.

ಮಕ್ಕಳು ಓದಿ ಹೋಗಿ ರಶ್ಮಿಕಾ ಕಾರಿನ ಕಿಟಕಿ ಗಾಜು ಬಡಿದರೂ ಕಿಟಕಿ ತೆರೆಯದೆ ರಶ್ಮಿಕಾ ಅಮಾನವೀಯತೆ ತೋರಿದ್ದಾರೆ.. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ರಶ್ಮಿಕಾ ನಡೆಗೆ ಕಿಡಿಕಾರುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top