fbpx
ಸಮಾಚಾರ

KPTCL ಬೃಹತ್ ನೇಮಕಾತಿ; 1492 ಹುದ್ದೆಗಳಿಗೆ ಅರ್ಜಿ ಅಹ್ವಾನ

ಸರ್ಕಾರೀ ಕೆಲಸ ಪಡೆಯಲು ಸೂಕ್ತ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೊಂದು ಸುವರ್ಣಾವಕಾಶ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ(KPTCL) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1492 ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನೇಮಕಾತಿಯ ಕುರಿತ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ

ಹುದ್ದೆಗಳ ಸಂಖ್ಯೆ
ಸಹಾಯಕ ಇಂಜಿನಿಯರ್ ( ವಿದ್ಯುತ್ )- 505
ಸಹಾಯಕ ಇಂಜಿನಿಯರ್ ( ಸಿವಿಲ್)- 28
ಕಿರಿಯ ಇಂಜಿನಿಯರ್ (ವಿದ್ಯುತ್)-570
ಕಿರಿಯ ಇಂಜಿನಿಯರ್ ( ಸಿವಿಲ್)-29
ಕಿರಿಯ ಸಹಾಯಕ-360
ಒಟ್ಟು ಹುದ್ದೆಗಳ ಸಂಖ್ಯೆ-1492

ವಿದ್ಯಾರ್ಹತೆ:
ಜೂನಿಯರ್ ಎಂಜಿನಿಯರ್(ಜೆಇ), ಅಸಿಸ್ಟೆಂಟ್ ಎಂಜಿನಿಯರ್(ಸಿವಿಲ್) ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಬೋರ್ಡ್​ನಿಂದ ಕಡ್ಡಾಯವಾಗಿ ಬಿಇ/ಬಿ.ಟೆಕ್ ಪದವಿ ಪಡೆದಿರಬೇಕು.

ವೇತನ ಶ್ರೇಣಿ
ಸಹಾಯಕ ಇಂಜಿನಿಯರ್ ( ವಿದ್ಯುತ್ ) Rs.41130-72920.
ಸಹಾಯಕ ಇಂಜಿನಿಯರ್ ( ಸಿವಿಲ್) Rs.41130-72920.
ಕಿರಿಯ ಇಂಜಿನಿಯರ್ (ವಿದ್ಯುತ್) Rs.26270-65020
ಕಿರಿಯ ಇಂಜಿನಿಯರ್ ( ಸಿವಿಲ್) Rs.26270-65020
ಕಿರಿಯ ಸಹಾಯಕ Rs.20220-51640

ವಯೋಮಿತಿ:
ಅಭ್ಯರ್ಥಿಗಳ ವಯಸ್ಸು ಕನಿಷ್ಠ 18- ಗರಿಷ್ಟ 35 ವರ್ಷದೊಳಗಿರಬೇಕು. ( ಅಭ್ಯರ್ಥಿಗಳಿಗೆ ವರ್ಗಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.)

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 07/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28/02/2022

ಅರ್ಜಿಸಲ್ಲಿಸುವುದು ಹೇಗೆ?
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕೆಳಗೆ ನಿಡಿರುವ ಲಿಂಕ್ ಕ್ಲಿಕ್ ಮಾಡುವ ಮೂಲಕ KPTCL ಅಧಿಕೃತ ಜಾಲತಾಣಕ್ಕೆ ಭೇಟಿನೀಡಿ ಅರ್ಜಿ ಸಲ್ಲಿಸಬೇಕು.

ನೇಮಕಾತಿಯ ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top