fbpx
ಸಮಾಚಾರ

ಪುನೀತ್​ ಹುಟ್ಟುಹಬ್ಬವನ್ನು ಹೇಗೆ ಆಚರಿಸಬೇಕು: ಅಭಿಮಾನಿಗಳಿಗೆ ವಿಶೇಷ ಕರೆ ನೀಡಿದ ರಾಘಣ್ಣ, ಏನದು?

ಕನ್ನಡ ಚಿತ್ರರಂಗದ ಪ್ರಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಮೂರು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಮೂರು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಈ ಮದ್ಯೆ ಇನ್ನೇನು ತಿಂಗಳೊಪ್ಪತ್ತಿನಲ್ಲಿ(ಮಾರ್ಚ್ 17) ಪುನೀತ್ ಬರ್ತಡೇ ಬರುತ್ತದೆ. ಪ್ರತಿವರ್ಷ ನೆಚ್ಚಿನ ನಟನ ಮನೆಗೆ ಹೋಗಿ ಖುದ್ದಾಗಿ ಅಪ್ಪು ಅವರಿಗೆ ವಿಶ್ ಮಾಡಿ ಬರುತ್ತಿದ್ದ ಅಭಿಮಾನಿಗಳಿಗೆ ಈ ಭಾರಿ ಅದು ಸಾಧ್ಯವಾಗುವುದಿಲ್ಲ. ಪುನೀತ್ ಅವರೇ ನಮ್ಮ ಬಳಿ ಇರದ ಕಾರಣ ಅಭಿಮಾನಿಗಳಿಗೆ ಅತೀವ ನೋವಿನ ಸಂಗತಿ.. ಇನ್ನೂ ಕೆಲವು ಅಭಿಮಾನಿ ಸಂಘಗಳು ಈ ಭಾರಿ ಅಪ್ಪು ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಬೇಕು ಎಂದು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾರಂಭಿಸದ್ದಾರೆ..

ಇದೀಗ ಅಪ್ಪು ಹುಟ್ಟುಹಬ್ಬದ ವಿಚಾರವಾಗಿ ಅಭಿಮಾನಿಗಳಿಗೆಲ್ಲಾ ರಾಘವೇಂದ್ರ ರಾಜಕುಮಾರ್ ಅವ್ರು ವಿಶೇಷ ಮನವಿ ಮಾಡಿಕೊಂಡಿದ್ದಾರೆ. “ಪ್ರತಿಯೊಬ್ಬ ಅಭಿಮಾನಿಯೂ ಒಂದೊಂದು ಗಿಡ ನೆಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು ಆಚರಣೆ ಮಾಡಬೇಕು. ಅದರಿಂದ ಪರಿಸರಕ್ಕೆ ಕೊಡುಗೆ ನೀಡಬೇಕು” ಎಂದು ರಾಘಣ್ಣ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ.

ಅದರ ಮೊದಲ ಹೆಜ್ಜೆ ಎಂಬಂತೆ ಇಂದು ಪುನೀತ್​ ರಾಜ್​ಕುಮಾರ್​ ಪತ್ನಿ ಅಶ್ವಿನಿ ಅವರು ಕಳೆದ ಜನವರಿ 29ರಂದು 500 ಸಸಿಗಳನ್ನು ವಿತರಣೆ ಮಾಡಿದ್ದಾರೆ. ‘ಅಪ್ಪು ಕಣ್ಣು ನೀಡಿದ್ದರಿಂದ ಈಗಾಗಲೇ ನೇತ್ರದಾನದ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿದೆ. ಅದೇ ರೀತಿ ಪರಿಸರ ಕಾಳಜಿ ಬಗ್ಗೆಯೂ ಸಂದೇಶ ಸಾರುವಂತಾಗಲಿ’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top