ಜನಪ್ರಿಯ ಭಾರತೀಯ ತಿಂಡಿ ತಿನಿಸುಗಳಲ್ಲಿ ಮಸಾಲೆ ದೋಸೆ ಕೂಡ ಒಂದು. ಅದರಲ್ಲೂ ಮಸಾಲೆ ದೋಸೆಯನ್ನು ತಿಂದವರು ಅದರ ರುಚಿಗೆ ಮನಸೋಲದೆ ಇರಲಾರರು. ಇಂಥಾ ಸೂಪರ್ ಡೂಪರ್ ಮಸಾಲೆ ದೋಸೆಯನ್ನು ತಿಂದು ಬರೋಬ್ಬರಿ 71 ಸಾವಿರ ಹಣ ಗೆಲ್ಲುವ ಸುವರ್ಣಾವಕಾಶ ದೊರಕುತ್ತಿದೆ.
ಈ ಸುದ್ದಿ ನಿಮಗೆ ವಿಚಿತ್ರ ಎನಿಸಿದರೂ ಇದು ಸತ್ಯ. ಹೌದು, ಬರೋಬ್ಬರಿ 10 ಅಡಿ ಉದ್ದದ ಈ ಮಸಾಲ ದೋಸೆಯನ್ನ ತಿಂದು ಮುಗಿಸಿದವರಿಗೆ 71 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ದೆಹಲಿಯ ಹೋಟೆಲ್ವೊಂದು ಸ್ಪರ್ಧೆಯೊಂದನ್ನ ಆಯೋಜಿಸಿದೆ. ಹೋಟೆಲ್ ನ ಈ ಸ್ಪರ್ಧೆಯ ಜಾಹಿರಾತು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ದೆಹಲಿಯ ಉತ್ತಮ್ ನಗರದಲ್ಲಿರುವ ‘ಸ್ವಾಮಿ ಶಕ್ತಿ ಸಾಗರ್ ಹೋಟೆಲ್’ ಈ ಸ್ಪರ್ಧೆಯನ್ನು ಆಯೋಜಿಸಿದ್ದು, ರುಚಿಕರವಾದ ಈ ಮಸಲಾ ದೋಸೆ ತಿಂದ ವ್ಯಕ್ತಿಗೆ ಈ ಬಹುಮಾನ ದೊರೆಯಲಿದೆ..
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
