fbpx
ಸಮಾಚಾರ

ಅಭಿಮಾನಿಗಳಿಗೆ ಬಿಗ್ ಶಾಕ್: ಐಪಿಎಲ್​ನಿಂದ ಹಿಂದೆ ಸರಿದ ಮಾಜಿ ಸ್ಟಾರ್ ಪ್ಲೇಯರ್

ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ 15ನೇ ಆವೃತ್ತಿ ಐಪಿಎಲ್ ಆವೃತ್ತಿಗೆ ಈಗಾಗಲೇ ಭರ್ಜರಿ ರೂಪುರೇಷೆಗಳು ಸಿದ್ಧವಾಗುತ್ತಿವೆ. ಇದರ ಮುಂದುವರೆದ ಭಾಗವಾಗಿ ಮುಂದಿನ ತಿಂಗಳು ೧೨ ಮತ್ತು ೧೩ ನೇ ತಾರೀಕಿನಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.

 

 

ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 590 ಆಟಗಾರರು ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 228 ಕ್ಯಾಪ್ಡ್ ಪ್ಲೇಯರ್ಸ್ ಮತ್ತು 355 ಅನ್‍ಕ್ಯಾಪ್ಡ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಆದರೆ ಈ ಪಟ್ಟಿಯಲ್ಲಿ ಮಾಜಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಕೈಲ್ ಜೇಮಿಸನ್ ಹೆಸರು ಇಲ್ಲ ಎಂಬುದೇ ವಿಶೇಷ. ಕಳೆದ ಸೀಸನ್​ನಲ್ಲಿ ಆರ್​ಸಿಬಿ ಪರ 15 ಕೋಟಿ ರೂ.ಗೆ ಆಡಿದ್ದ ಕೈಲ್ ಜೇಮಿಸನ್ ಈ ಬಾರಿ ಹೆಸರು ನೀಡಿಲ್ಲ ಎಂಬ ವಿಚಾರ ಅಭಿಮಾನಿಗಳಿಗೆ ಶಾಕ್ ತಂದಿದೆ. ಏಕೆಂದರೆ ನ್ಯೂಜಿಲೆಂಡ್​ನಿಂದ ಒಟ್ಟು 24 ಆಟಗಾರರು ಆಯ್ಕೆಯಾಗಿದ್ದು, ಆದರೆ ಈ ಪಟ್ಟಿಯಲ್ಲಿ ಜೇಮಿಸನ್ ಹೆಸರು ಕಾಣಿಸುತ್ತಿಲ್ಲ. ಹೀಗಾಗಿ ಜೇಮಿಸನ್ ಈ ಸಲ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top