fbpx
ಸಮಾಚಾರ

ಪ.ಬಂಗಾಲ ಸಚಿವರೂ ಸ್ಪರ್ಧೆಯಲ್ಲಿ: ಐಪಿಎಲ್ ಮೆಗಾ ಹರಾಜು ಆಟಗಾರರ ಪಟ್ಟಿಯಲ್ಲಿ ಸಚಿವನ ನೋಂದಣಿ, 50 ಲಕ್ಷ ರೂ ಮೂಲಬೆಲೆ

ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ 15ನೇ ಆವೃತ್ತಿ ಐಪಿಎಲ್ ಆವೃತ್ತಿಗೆ ಈಗಾಗಲೇ ಭರ್ಜರಿ ರೂಪುರೇಷೆಗಳು ಸಿದ್ಧವಾಗುತ್ತಿವೆ. ಇದರ ಮುಂದುವರೆದ ಭಾಗವಾಗಿ ಮುಂದಿನ ತಿಂಗಳು ೧೨ ಮತ್ತು ೧೩ ನೇ ತಾರೀಕಿನಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ.

 

 

ಹರಾಜಿಗೆ ಆಟಗಾರರ ಅಂತಿಮ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 590 ಆಟಗಾರರು ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಫೆಬ್ರವರಿ 12 ಮತ್ತು 13ರಂದು ಬೆಂಗಳೂರಿನಲ್ಲಿ ನಡೆಯಲಿರುವ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ 228 ಕ್ಯಾಪ್ಡ್ ಪ್ಲೇಯರ್ಸ್ ಮತ್ತು 355 ಅನ್‍ಕ್ಯಾಪ್ಡ್ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

 

ವಿಶೇಷವೆಂದರೆ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಮನೋಜ್ ತಿವಾರಿ ಹೆಸರು ಕೂಡಾ ಅಂತಿಮ ಪಟ್ಟಿಯಲ್ಲಿದೆ. ಈ ಹಿಂದೆ ಭಾರತ ತಂಡದ ಪರವೂ ಆಡಿರುವ ಮನೋಜ್ ತಿವಾರಿ 2018ರಲ್ಲಿ ಕೊನೆಯದಾಗಿ ಐಪಿಎಲ್ ಪಂದ್ಯವಾಡಿದ್ದರು. ಐಪಿಎಲ್ ನ ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್, ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಪರವಾಗಿ ಮನೋಜ್ ತಿವಾರಿ ಆಡಿದ್ದಾರೆ.  ಈ ಬಾರಿ ತಿವಾರಿ 50 ಲಕ್ಷ ರೂ ಮೂಲಬೆಲೆ ಹೊಂದಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top