fbpx
ಸಮಾಚಾರ

ಇತ್ತೀಚಿಗಷ್ಟೇ ಧನುಷ್ ರಿಂದ ಡೈವೋರ್ಸ್ ಪಡೆದಿದ್ದ ರಜಿನಿ ಪುತ್ರಿ ಐಶ್ವರ್ಯ ಆಸ್ಪತ್ರೆಗೆ ದಾಖಲು

ಕಳೆದ ಕೆಲ ದಿನಗಳ ಹಿಂದೆಯಷ್ಟೇ ನಟ ಧನುಷ್ ಅವರ ಜೊತೆಗಿನ ವೈವಾಹಿಕ ಜೀವನವನ್ನು ಡೈವೋರ್ಸ್ ಪಡೆದುಕೊಳ್ಳುವ ಮೂಲಕ ಕಡೆದುಕೊಂಡಿದ್ದ ಐಶ್ವರ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೂಪರ್ ಸ್ಟಾರ್ ರಜಿನಿಕಾಂತ್ ಮಗಳಾಗಿರುವ ಐಶ್ವರ್ಯ ವಿಚ್ಛೇದನದ ನಂತರ ಹೆಚ್ಚೇನೂ ಹೊರಗೆ ಕಾಣಿಸಿಕೊಂಡಿರಲಿಲ್ಲ ಈಗ ಆಸ್ಪತ್ರೆಗೆ ದಾಖಲಾಗುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

 

 

ವಿಚ್ಛೇದನ ಪಡೆದಿರುವ ಅವರಿಗೆ ಈಗ ಅನಾರೋಗ್ಯದ ಸಮಸ್ಯೆ ಎದುರಾಗಿದೆ. ತಮಗೆ ಕೊರೊನಾ ವೈರಸ್ ಸೋಂಕು​ ತಗುಲಿರುವ ಕುರಿತು ಸ್ವತಃ ಐಶ್ವರ್ಯಾ ರಜನಿಕಾಂತ್ ಅವರೇ ಮಾಹಿತಿ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಜೊತೆಗೆ ಸದ್ಯ ತಾವು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ತಿಳಿಸಿದ್ದಾರೆ.

‘ಎಲ್ಲ ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದರೂ ಕೂಡ ನನಗೆ ಕೊರೊನಾ ಪಾಸಿಟಿವ್​ ಬಂದಿದೆ. ಈಗ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ದಯವಿಟ್ಟು ಎಲ್ಲರೂ ಮಾಸ್ಕ್​ ಧರಿಸಿ. ವ್ಯಾಕ್ಸಿನ್​ ಪಡೆದು ಹುಷಾರಾಗಿರಿ’ ಎಂದು ಐಶ್ವರ್ಯಾ ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ಬೇಸರದ ಮುಖ ಹೊತ್ತುಕೊಂಡು ತಮ್ಮ ಫೋಟೋವನ್ನ ಕೂಡ ಹಂಚಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top