fbpx
ಸಮಾಚಾರ

ಪರಶುರಾಮ ಚಿತ್ರದಲ್ಲಿ ಸ್ವತಃ ಅಣ್ಣಾವ್ರೇ ಕರೆದು ಅಶೋಕ್ ರಾವ್ ಗೆ ಕರೆದು ವಿಲನ್ ಪಾತ್ರ ನೀಡಿದ್ದರಂತೆ

ಕನ್ನಡ ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಕಲಾವಿದ ಅಶೋಕ್​ರಾವ್ ಇಂದು ನಿಧನ ಹೊಂದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದ ಅಶೋಕ್ ರಾವ್ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ಅಶೋಕ್ ಅವರು ಅವರ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆ ಅವರಿಗೆ ಜಾಸ್ತಿಯಾಗಿ ಬಳಲುತ್ತಿದ್ದರು. ಅವರು ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯೆರಾತ್ರಿ 12.30ಕ್ಕೆ ಕೊನೆಯುಸಿರೆಳೆದಿದ್ದಾರೆ. ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.

ಅಣ್ಣಾವ್ರೇ ಕರೆದು ವಿಲನ್ ಪಾರ್ಟ್ ಮಾಡಿಸಿದ್ದರು:
ಡಾ. ರಾಜ್ ಕುಮಾರ್ ಅವರ ‘ಪರಶುರಾಮ್’ ಚಿತ್ರದ ವಿಲನ್ ಆಗಿದ್ದ ಅಶೋಕ್ ರಾವ್, ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್ ರಾವ್​ ನಟಿಸಿದ್ದರು. ‘ಆವೇಶ’, ‘ಮತ್ತೆ ಹಾಡಿತು ಕೋಗಿಲೆ’, ‘ಕಾಲಚಕ್ರ’, ‘ಬಾ ನಲ್ಲೆ ಮಧುಚಂದ್ರಕೆ’, ‘ಹಬ್ಬ’ ಮುಂತಾದ ಚಿತ್ರಗಳಲ್ಲಿ ಅಶೋಕ್ ಬಣ್ಣ ಹಚ್ಚಿಸಿದ್ದಾರೆ.

ಅಶೋಕ್ ರಾವ್ ಅವರಿಗೆ ಡಾ ರಾಜ್‌ಕುಮಾರ್ ‘ಪರಶುರಾಮ’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಖುದ್ದು ಅಣ್ಣಾವ್ರೆ ಅವರಿಗೆ ಖಳನಾಯಕನ ಪಾತ್ರ ಮಾಡಿಸಿದ್ದರು. ಕನ್ನಡದ ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಮತ್ತೊಂದು ಕೊಂಡಿ ಕಳುಚಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top