fbpx
ಸಮಾಚಾರ

ಕನ್ನಡ ಪಠ್ಯಪುಸ್ತಕದಲ್ಲಿ ಮಲಯಾಳಂ ನಟನ ಫೋಟೋ: ನೋಡಿ ಬೆರಗಾದ ನಟ ಹೇಳಿದ್ದೇನು ಗೊತ್ತಾ?

ಸೆಲೆಬ್ರೆಟಿಗಳ ಫೋಟೋಗಳನ್ನು ಕೆಲವೊಮ್ಮೆ ಸಾಂದರ್ಭಿಕವಾಗಿ ಬಳಸಲಾಗುತ್ತದೆ. ಹೇರ್‌ಕಟ್ ಅಂಗಡಿಯಲ್ಲಿ, ಬೇಕರಿಯಲ್ಲಿ, ಆಟೋ ಮತ್ತು ಬಸ್‌ಗಳ ಮೇಲೆ ಹೀಗೆ ನೂರಾರು ಕಡೆ ಜನಪ್ರಿಯ ತಾರೆಯಲ್ಲಿ ನೋಡಬಹುದು. ಇದೀಗ ಮಲಯಾಳಂ ನಟನ ಫೋಟೋವನ್ನು ಕರ್ನಾಟಕದ ಪಠ್ಯ ಪುಸ್ತಕದಲ್ಲಿ ಮಲೆಯಾಳಂ ಸ್ಟಾರ್ ನಟನ ಫೋಟೋ ಬಳಸಿಕೊಳ್ಳಲಾಗಿದ್ದು ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಮಲಯಾಳಂ ಚಿತ್ರರಂಗದಲ್ಲಿ ಕುಂಚಾಕೋ ಬೋಬನ್ ಉತ್ತಮ ನಟ. ತಮ್ಮ ವೈವಿಧ್ಯಮಯ ಪಾತ್ರಪೋಷಣೆಯಿಂದ ಅಪಾರ ಅಭಿಮಾನಿ ಬಳಗವನ್ನು ಅವರು ಸಂಪಾದಿಸಿದ್ದಾರೆ. ಕುಂಚಾಕೋ ಬೋಬನ್ ಫೋಟೋವನ್ನು ಕರ್ನಾಟಕದ ಪುಸ್ತಕವೊಂದರಲ್ಲಿ ಬಳಸಲಾಗಿದೆ. ಅದುವೇ ಪೋಸ್ಟ್‌ ಮ್ಯಾನ್‌ ಆಗಿ ಎಂಬುದು ವಿಶೇಷ.

 

 

View this post on Instagram

 

A post shared by Kunchacko Boban (@kunchacks)

 

ಈ ಫೋಟೋವನ್ನು ನೋಡಿದ ಕುಂಚಾಕೋ ಬೋಬನ್ ತುಂಬಾ ಆಶ್ಚರ್ಯ ಆಗಿದ್ದಲ್ಲದೆ, ನಾನು ಕರ್ನಾಟಕದಲ್ಲಿ ಕೊನೆಗೂ ಸರ್ಕಾರಿ ಕೆಲಸವನ್ನು ಪಡೆದಿದ್ದೇನೆ ಎಂದು ತಮಾಷೆಯಿಂದ ಹೇಳಿದ್ದಾರೆ. ಮತ್ತು ಈ ಫೋಟೋವನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಕೊಂಡು ಎಂಜಾಯ್​ ಮಾಡುತ್ತಿದ್ದಾರೆ.

ಅಂದಹಾಗೆ ಕುಂಚಾಕೋ ಬೋಬನ್ ಹಂಚಿಕೊಂಡಿರುವ ಚಿತ್ರ ಅವರ ‘ಒರಿಡತೊರು ಪೋಸ್ಟ್​ಮ್ಯಾನ್’ ಚಿತ್ರದ್ದು. ಅದರಲ್ಲಿ ಪೋಸ್ಟ್​ಮ್ಯಾನ್ ಆಗಿ ಕಾಣಿಸಿಕೊಂಡಿದ್ದ ಕುಂಚಾಕೋ, ಎಲ್ಲರ ಮನಗೆದ್ದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top