fbpx
ಸಮಾಚಾರ

ನೆನ್ನೆಯಷ್ಟೇ ಸ್ವಯಂ ನಿವೃತ್ತಿ ಪಡೆದಿದ್ದ ಇ.ಡಿ ಅಧಿಕಾರಿ ಈಗ ಬಿಜೆಪಿ ಅಭ್ಯರ್ಥಿ!

ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಜೇಶ್ವರ್ ಸಿಂಗ್ ತಮ್ಮ ಹುದ್ದೆಯಿಂದ ನೆನ್ನೆಯಷ್ಟೇ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಇದೀಗ ನಿವೃತ್ತಿ ಪಡೆದ ಮರುದಿನವೇ ಬಿಜೆಪಿ ಅವರನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಹೆಸರಿಸಿದೆ. ಲಕ್ನೋದ ಸರೋಜಿನಿ ನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿಯಲಿದ್ದಾರೆ.

ಬಿಜೆಪಿ ತಮಗೆ ಟಿಕೆಟ್ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು “ಬಿಜೆಪಿಯ ಸಿದ್ಧಾಂತವು ಈ ದೇಶದ ಭವಿಷ್ಯವಾಗಿದೆ. ಯೋಗಿ ಸರಕಾರ ಒಳ್ಳೆಯ ಕೆಲಸ ಮಾಡುತ್ತಿದೆ ಹಾಗೂ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ. ಅವರನ್ನು ನಾವು ಬೆಂಬಲಿಸಬೇಕು, ಹೆಚ್ಚುತ್ತಿರುವ ಕೋಮುವಾದವನ್ನು ನಿಯಂತ್ರಿಸಬೇಕು” ಎಂದಿದ್ದಾರೆ.

ರಾಜೇಶ್ವರ್ ಸಿಂಗ್ ಅವರು ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಮೇಲೆ ಕೇಳಿಬಂದ ಪ್ರತಿ ಭ್ರಷ್ಟಾಚಾರ ಆರೋಪಗಳ ಪ್ರಕರಣಗಳ ತನಿಖೆ ನಡೆಸಿದ ತಂಡಗಳಲ್ಲಿ 2009ರಿಂದಲೂ ಅವರು ಭಾಗಿಯಾಗಿದ್ದರು. 2ಜಿ ತರಂಗಾಂತರ ಹಂಚಿಕೆ ಹಗರಣ, ಕಾಮನ್‌ವೆಲ್ತ್ ಗೇಮ್ಸ್ ಹಗರಣ ಮತ್ತು ಕಲ್ಲಿದ್ದಲು ಗಣಿ ಹಂಚಿಕೆ ಹಗರಣಗಳು ಇದರಲ್ಲಿ ಸೇರಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top