fbpx
ಸಮಾಚಾರ

ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದ ಅಶೋಕ್​ ರಾವ್​ ವಿಧಿವಶ

ಸ್ಯಾಂಡಲ್​ವುಡ್​ನ ಹಿರಿಯ ಕಲಾವಿದ ಅಶೋಕ್​ರಾವ್ ಕೊನೆಯುಸಿರೆಳದಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತಿದ್ದ ಅಶೋಕ್ ರಾವ್ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ. ನಟ ಅಶೋಕ್ ರಾವ್ ಪತ್ನಿ, ಮಗ ಹಾಗೂ ಸೊಸೆಯನ್ನು ಅಗಲಿದ್ದಾರೆ.

ಕಳೆದ 15 ದಿನಗಳಿಂದ ಕ್ಯಾನ್ಸರ್ ಖಾಯಿಲೆ ಅವರಿಗೆ ಜಾಸ್ತಿಯಾಗಿ ಬಳಲುತ್ತಿದ್ದರು. ಅವರು ಪ್ರತೀ ದಿನ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಕೂಡ ಚಿಕಿತ್ಸೆ ಪಡೆದ ನಂತರವೂ ಚೆನ್ನಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯೆರಾತ್ರಿ 12.30ಕ್ಕೆ ಕೊನೆಯುಸಿರೆಳೆದಿದ್ದಾರೆ. ವಿದ್ಯಾರಣ್ಯಪುರದ ನಿವಾಸದಲ್ಲಿ ಅಶೋಕ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿದೆ.

ಡಾ. ರಾಜ್ ಕುಮಾರ್ ಅವರ ‘ಪರಶುರಾಮ್’ ಚಿತ್ರದ ವಿಲನ್ ಆಗಿದ್ದ ಅಶೋಕ್ ರಾವ್, ಕನ್ನಡದ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಶೋಕ್ ರಾವ್​ ನಟಿಸಿದ್ದರು. ಅಶೋಕ್ ಅವರು ಅವರ ಕಂಚಿನ ಕಂಠದಿಂದಲೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top