fbpx
ಸಮಾಚಾರ

ಜೇಮ್ಸ್ ಚಿತ್ರದ ಅಪ್ಪು ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಶಿವಣ್ಣ

ಪುನೀತ್ ರಾಜ ಕುಮಾರ್ ಅಭಿಮಾನಿಗಳನ್ನೂ ಸೇರಿದಂತೆ ಇತರೆ ಸಿನಿ ರಸಿಕರನ್ನು ಕಾಡುತ್ತಿದ್ದ ಪ್ರಶ್ನೆಗೆ ಕೊಂದೆಗೂ ಅಧಿಕೃತ ಉತ್ತರವೊಂದು ಸಿಕ್ಕಿದೆ.. ಪುನೀತ್ ರಾಜಕುಮಾರ್ ಅವರ ಕೊನೆ ಸಿನಿಮಾಗಳಲ್ಲಿ ಒಂದಾಗಿರುವ ಜೇಮ್ಸ್ ಚಿತ್ರದ ಅಪ್ಪು ಪಾತ್ರಕ್ಕೆ ಯಾರು ಧ್ವನಿ ನೀಡುತ್ತಾರೆ ಎಂಬ ಪ್ರಶ್ನೆ ಹಲವು ದಿನಗಳಿಂದ ಭಾರಿ ಚರ್ಚೆಯಾಗುತ್ತಿತ್ತು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಪುನೀತ್ ರಾಜ್‍ಕುಮಾರ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಎರಡು ದಿನಗಳ ಕಾಲ ಡಬ್ಬಿಂಗ್ ಕಾರ್ಯ ನಡೆದಿದೆ. ಈ ಬಗ್ಗೆ ಮಾತನಾಡಿರೋ ಶಿವಣ್ಣ “ನಿನ್ನೆ ಜೀಮ್ಸ್ ಸಿನಿಮಾಗೆ ಡಬ್ ಮಾಡಿದ್ದೇನೆ. ವಾಯ್ಸ್ ಕೊಡೋದು ಬಹಳ ಕಷ್ಟವಾಯ್ತು. ಆದ್ರೂ ನನ್ನಿಂದ ಆದ ಪ್ರಯತ್ನ ಮಾಡಿದ್ದೀನಿ” ಎಂದಿದ್ದಾರೆ

ಬೇರೆ ನಟನ ಪಾತ್ರಕ್ಕೆ ಡಬ್ ಮಾಡೋದು ತುಂಬಾ ಕಷ್ಟ. ಅದರಲ್ಲೂ ಒಬ್ಬ ನಾಯಕನಾಗಿ ಅವರ ವಾಯ್ಸ್ ಇಮಿಟೇಟ್ ಮಾಡೋದು ಬಹಳ ಕಷ್ಟ. ಅಪ್ಪು ವಾಯ್ಸ್ ಗೆ ಮ್ಯಾಚ್ ಕೊಡೋದು ಸಾಧ್ಯವಿಲ್ಲ. ನೋಡೋಣ ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಅನ್ಸುತ್ತೆ. ” ಎಂದಿದ್ದಾರೆ ಶಿವಣ್ಣ

ಎಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಅವರು ಬದುಕಿದ್ದಾಗ ಅಭಿನಯಿಸಿದ ಕೊನೆಯ ಚಿತ್ರ ಜೇಮ್ಸ್. ಚೇತನ್ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಜೇಮ್ಸ್ ಚಿತ್ರಕ್ಕೆ ತಮ್ಮ ಭಾಗದ ಸಂಪೂರ್ಣ ಚಿತ್ರಗಳನ್ನು ಮುಗಿಸಿದ ಪುನೀತ್ ರಾಜಕುಮಾರ್ ಅವರು ಡಬ್ಬಿಂಗ್ ನಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ವಿಧಿ ಆಟವೇ ಬೇರೆಯಾಗಿ ಅವ್ರು ನಮ್ಮಿಂದ ದೂರ ವಾಗಿದ್ದಾರೆ.

ಪುನೀತ್ ಅವರ ಅನುಪಸ್ಥಿಯಲ್ಲಿಯೇ ಬಾಕಿ ಉಳಿದಿದ್ದ ದೃಶ್ಯಗಳ ಶೂಟಿಂಗ್ ಅನ್ನು ನಿರ್ದೇಶಕ ಚೇತನ್ ಮುಗಿಸಿದ್ದು ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಗಮನ ಹರಿಸಿದ್ದಾರೆ. ಸದ್ಯ ಅಪ್ಪು ನಮ್ಮ ಜೊತೆ ಇರದೇ ಇರುವ ಕಾರಣ ‘ಜೇಮ್ಸ್‌ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿತ್ತು. ಶೂಟಿಂಗ್ ಟೈಮ್ ನಲ್ಲಿ ರೆಕಾರ್ಡ್ ಆಗಿದ್ದ ಪುನೀತ್​ ಸ್ಕೇಲಿಟನ್ ಧ್ವನಿಯನ್ನ ಡೆವಲಪ್​ ಮಾಡಿ ಅದನ್ನೆ ಅವರ ಪಾತ್ರಕ್ಕೆ ಅಳವಡಿಸುವ ಪ್ಲಾನ್​ನಲ್ಲಿ ಚಿತ್ರತಂಡವಿತ್ತು. ಆದರೆ ಹಲವಾರು ಕಾರಣಗಳಿಂದ ಧ್ವನಿಯನ್ನು ಯಶಸ್ವಿಯಾಗಿ ಹೊಂದಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚಿತ್ರತಂಡ ಈ ಆಸೆಯನ್ನು ಕೈಬಿಟ್ಟಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top