fbpx
ಸಮಾಚಾರ

ಪ್ರಜಕೀಯದ ಮೇಲೆ ಆಸಕ್ತಿ ಕಳೆದುಕೊಂಡರೇ ಉಪ್ಪಿ? ಈ ಬಗ್ಗೆ ಸ್ವತಃ ಉಪೇಂದ್ರ ಹೇಳಿದ್ದೇನು ಗೊತ್ತಾ?

ವಾಸ್ತವವಾಗಿ ಒಪ್ಪಿಕೊಳ್ಳೋದು ಕಷ್ಟ ಎಂಬಂಥಾ ವಿರೋಧಾಭಾಸಗಳ ನಡುವೆಯೂ ಪ್ರಜಾಕೀಯ ಎಂಬ ಕಲ್ಪನೆಯಿಂದ ರಾಜಕೀಯ ಕಾಲಿಟ್ಟು ಹಲವು ಕನಸು, ಭರವಸೆಗಳೊಂದಿಗೆ ಒಂದಷ್ಟು ನಿರೀಕ್ಷಿ ಮೂಡಿಸಿದ್ದವರು ರಿಯಲ್ ಸ್ಟಾರ್ ಉಪೇಂದ್ರ. ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಾಗ ಕರ್ನಾಟಕದಲ್ಲೊಂದು ನಿರೀಕ್ಷೆ ಮೂಡಿಕೊಂಡಿದ್ದು ಸುಳ್ಳಲ್ಲ.. ಆದರೆ ಅವರು ಪ್ರಜಕೀಯ ಪಕ್ಷ ಶುರು ಮಾಡಿ ಮೂರ್ನಾಲ್ಕು ವರ್ಷಗಳೇ ಕಳೆದರೂ ಅವರಾಗಲಿ ಅವರ ಪಕ್ಷವಾಗಲಿ ಹೆಚ್ಚುನೂ ಸದ್ದು ಮಾಡುತ್ತಿಲ್ಲ.

ಈ ಮದ್ಯೆ ಪ್ರಜಾಕೀಯ‌ ಮೇಲೆ ಆಸಕ್ತಿ ಕಳೆದುಕೊಂಡರಾ ಉಪೇಂದ್ರ ಎಂಬ ಕೆಲವರ ಈ ಅನುಮಾನ ಮೂಡಿತ್ತು. ಇದೀಗ ಈ ಬಗ್ಗೆ ಸ್ವತಃ ಉಪೇಂದ್ರ ಅವರೇ ಪ್ರತಿಕ್ರಿಯೆ ನೀಡಿದ್ದು ಎಲ್ಲಾ ಮನುಮಾನಗಳಿಗೆ ತೆರೆ ಎಳೆದಿದ್ದಾರೆ. “ಇದು ಬೇರೆ ರಾಜಕೀಯ ಪಕ್ಷಗಳಂತೆ ಅಭ್ಯರ್ಥಿಗಳ, ನಾಯಕರ ಪಕ್ಷವಲ್ಲ”, ‘ನಾಯಕನಾಗಲು ನಿಜಕ್ಕೂ ನನಗೆ ಆಸಕ್ತಿ ಇಲ್ಲ, ನಿಮ್ಮನ್ನೆಲ್ಲಾ ನಾಯಕರನ್ನಾಗಿ ನೋಡಲು ತುಂಬಾ ಆಸಕ್ತಿ ಇದೆ’ ಪ್ರಜಾಕೀಯ ಬಿಡುವ‌ ಮಾತೇ ಯಿಲ್ಲ ಅಂತ ಉಪ್ಪಿ ಪುನರುಚ್ಚರಿಸಿದ್ದಾರೆ.

 

 

ಈ ಬಗ್ಗೆ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್ ಮಾಡಿರುವ ಉಪೇಂದ್ರ ಅವರ ಪ್ರತಿಕ್ರಿಯೇ ಈ ರೀತಿ ಇದೆ:
“ಪ್ರಜಾಕೀಯ” ಹೆಸರೇ ಸೂಚಿಸುವಂತೆ ಇದು ಪ್ರಜೆಗಳ ಅಂದರೆ ಮತದಾರರ ಪಕ್ಷ. ಇಲ್ಲಿ ಪ್ರತಿ ಒಬ್ಬ ಪ್ರಜೆಯೂ ತನ್ನ ಕರ್ತವ್ಯವನ್ನು ಮಾಡಬೇಕು. ನಾಯಕನೊಬ್ಬ ಬದಲಾವಣೆ ತರುತ್ತಾನೆ ಎಂದು ನಂಬಿಸಿ ನಂಬಿಸಿ ಜನರನ್ನು ನಿರುತ್ಸಾಹಿಗಳನ್ನಾಗಿ, ನಿಶ್ಪ್ರಯೋಜಕರನ್ನಾಗಿ ಪರಾವಲಂಬಿಗಳನ್ನಾಗಿ ಮಾಡಿರುವುದೇ ರಾಜಕೀಯ. ನಾನೂ ಅದನ್ನೇ ಮಾಡಬೇಕೇ ? ಈ ದೇಶ ನನ್ನೊಬ್ಬನದೇ ? ನೀವೇಕೆ ಸಾಮಾನ್ಯರಂತೆ ಯೋಚಿಸುತ್ತೀರಿ ? ನಿಮಗಾಗಿ ಒಂದು ಪಕ್ಷ ಇದೆ, ಇದು ಮತದಾರರ ಪಕ್ಷ. ಇದು ಬೇರೆ ರಾಜಕೀಯ ಪಕ್ಷಗಳಂತೆ ಅಭ್ಯರ್ಥಿಗಳ, ನಾಯಕರ ಪಕ್ಷವಲ್ಲ. ಅಧಿಕಾರ ಪ್ರಜೆಗಳ ಬಳಿ ಇರಬೇಕೆಂದರೆ ಪ್ರಜೆಗಳಾದ ನೀವೇ ಒಳ್ಳಯ ಅಭ್ಯರ್ಥಿಗಳನ್ನು ಈ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಸೂಚಿಸಿ. ಇದೆಲ್ಲಕ್ಕಿಂತ ಮೊದಲು ಪ್ರಜಾಕೀಯ ಆಪ್ ಡೌನ್ಲೊಡ್ ಮಾಡಿ ಒಮ್ಮೆ ಕೇಳಿ ಇಲ್ಲಾ ಓದಿ….

www.prajaakeeya.Org ನಾಯಕನಾಗಲು ನಿಜಕ್ಕೂ ನನಗೆ ಆಸಕ್ತಿ ಇಲ್ಲ ಆದರೆ ನಿಮ್ಮನ್ನೆಲ್ಲಾ ನಾಯಕರನ್ನಾಗಿ ನೋಡಲು ತುಂಬಾ ಆಸಕ್ತಿ ಇದೆ, ನಾನು ಜವಾಬ್ದಾರಿ, ಆಸಕ್ತಿ ಕಳೆದುಕೊಳ್ಳುತ್ತಿಲ್ಲ. ನಾನು ಹಿಂದೆ ನಿಂತಿರುವುದು ನೀವು ನನ್ನ ಮುಂದೆ ಬನ್ನಿ ಎಂಬ ತವಕ ಕಾತುರದಿಂದ…. ಇಷ್ಟು ಹೇಳಿದ ಮೇಲೂ ನಿಮಗೆ ನಾನು ಜನರನ್ನು ನೇರವಾಗಿ ಸಂಪರ್ಕ ಮಾಡಿ ಪ್ರಜಾಕೀಯ ವಿಷಯಗಳನ್ನು ಹೇಳಬೇಕೆಂದರೆ ಈ ವರ್ಷ ಪೂರ್ತಿ ಇಡೀ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಿ, ಮತದಾರರಾದ ನೀವೇ ನಾಯಕರಾಗಬೇಕು ಆಯ್ಕೆಯಾದವರು ನೀವು ಹೇಳಿದಂತೆ ಕೇಳಿ ಕೆಲಸ ಮಾಡಿ ನಿಮಗೆ ವರದಿ ಒಪ್ಪಿಸಿ ನೀವು ಇಷ್ಟ ಪಟ್ಟರೆ ಕೆಲಸದಲ್ಲಿ ಮುಂದುವರಿಯಬೇಕು ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು, ಅವರು ರಾಜೀನಾಮೆ ಕೊಡದಿದ್ದರೆ ನೀವು ಬಲವಂತವಾಗಿ ಕೊಡಿಸುವ ಪ್ರಜಾಪ್ರಭುಗಳಾಗ ಬೇಕು ನಿಮ್ಮ ಜೊತೆ ನಾನಿರಬೇಕು ಇದೇ ನನ್ನಾಸೆ. ತಪ್ಪಿದ್ದರೆ ಕ್ಷಮಿಸಿ. ಎಂದೆಂದೂ ನಿಮ್ಮ ಜೊತೆ ನಾನಿರ್ತ್ತೇನೆ 🙏🙏🙏

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top