fbpx
ಸಮಾಚಾರ

“ನನಗೆ 2 ಭಾರಿ ಹೃದಯಾಘಾತವಾಗಿದೆ, ದೇವರು ಈ ಅವಕ್ಶವನ್ನು ‘ಅಪ್ಪು’ಗೆ ಏಕೆ ನೀಡಲಿಲ್ಲ” ಅರ್ಜುನ್ ಜನ್ಯ ಭಾವುಕ ನುಡಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮಿಂದ ದೂರವಾಗಿ ಬರೋಬ್ಬರಿ ಮೂರು ತಿಂಗಳು ಕಳೆದುಹೋಗಿದೆ. ಗಟ್ಟಿಮುಟ್ಟಾಗಿದ್ದ ಆರೋಗ್ಯವಂತ ಅಪ್ಪು ಇದ್ದಕ್ಕಿಂತ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಇಡೀ ಕರ್ನಾಟಕಕ್ಕೆ ಸಿಡಿಲು ಬಡಿದಂತೆ ಬಡಿದಿತ್ತು. ಅಪ್ಪು ಆಗಲಿ ಮೂರು ತಿಂಗಳೇ ಕಳೆದಿದ್ದರೂ ಅದರಿಂದ ಕನ್ನಡಿಗರ ಮನಸ್ಸಿಗೆ ಆಗಿರುವ ನೋವಿನ ಪ್ರಮಾಣ ಕಡಿಮೆಯಾಗಿಲ್ಲ.

ಕರ್ನಾಟಕದಾದ್ಯಂತ ಎಲ್ಲೆಲ್ಲೂ ಅಪ್ಪು ಸ್ಮರಣಾರ್ಥ ಕಾರ್ಯಗಳು ನಡೆಯುತ್ತಿವೆ. ಪ್ರತಿಯೊಬ್ಬ ತಮಗೆ ತೋಚಿದ ರೀತಿಯಲ್ಲಿ ಅಪ್ಪು ಅವರನ್ನು ಸ್ಮರಿಸುತ್ತಿದ್ದಾರೆ. ಅದೇ ರೀತಿ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ನಾಗೇಂದ್ರ ಪ್ರಸಾದ್ ಸೇರಿ ಪುನೀತ್ ಗೆ ನಮನ ಸಲ್ಲಿಸುವ ಸಲುವಾಗಿ ಗೀತೆಯೊಂದನ್ನು ರಚಿಸಿದ್ದರು. ಈ ಹಾಡನ್ನು ಬಿಡುಗಡೆಗೊಳಿಸಲು ಪ್ರೆಸ್ ಕ್ಲಬ್ ನಲ್ಲಿ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ಜುನ್ ಜನ್ಯ ಅಪ್ಪು ಬಗ್ಗೆ ಕೆಲ ವಿಚಾರಗಳನ್ನ ಹಂಚಿಕೊಂಡರು. ಈ ವೇಳೆ ತಮಗೆ ೨ ಬಾರಿ ಹಾರ್ಟ್ ಅಟ್ಯಾಕ್ ಆಗಿರುವ ವಿಚಾರವನ್ನು ಬಹಿರಂಗಪಡಿಸಿದರು.

“ನನಗೆ 41 ವರ್ಷ. ಎರಡು ಸಲ ಹಾರ್ಟ್ ಅಟ್ಯಾಕ್ ಆಗಿದೆ.. ದೇವರೇ ದಯೆಯಿಂದ ಬದುಕಿ ಬಂದಿದ್ದೇನೆ. ನನಗೆ ನೀಡಿದ ಅವಕಾಶವನ್ನ ಪುನೀತ್ ಸರ್ ಗೆ ಯಾಕೆ ದೇವರು ನೀಡಲಿಲ್ಲ? 15 ನಿಮಷವಾದರೂ ಅವಕಾಶ ನೀಡಿದ್ದರೆ ಸಾಕಾಗಿತ್ತು, ಹೇಗಾದರೂ ಮಾಡಿ ನಾವು ಅವರನ್ನ ಉಳಿಸಿಕೊಳ್ಳಬಹುದಿತ್ತು. ಆದರೆ ಆ ದೇವರು ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಎಷ್ಟೆಲ್ಲಾ ಒಳ್ಳೆ ಕೆಲ್ಸಗಳನ್ನ ಮಾಡಿರುವ ಇಂಥಾ ವ್ಯಕ್ತಿಗೆ ದೇವರು ಒಂದೇ ಒಂದು ಇಷ್ಟು ಒಳ್ಳೆ ಕೆಲಸಗಳನ್ನು ಮಾಡಿದ ಅಂತಹ ಒಬ್ಬ ಒಳ್ಳೆ ವ್ಯಕ್ತಿಗೆ ಒಂದು ಅವಕಾಶ ಕೊಟ್ಟಿದ್ದರೆ ಈ ಸಂಧರ್ಭ ಬರುತ್ತಿರಲಿಲ್ಲ ಅಂತ ಭಾವುಕರಾಗಿ ಮಾತನಾಡಿದ್ದಾರೆ ಅರ್ಜುನ್​ ಜನ್ಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top