fbpx
ಸಮಾಚಾರ

ಬಜೆಟ್ ನಲ್ಲಿ ಘೋಷಣೆಯಾದ ಇ-ಪಾಸ್ಪೋರ್ಟ್(E- Passport) ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

ವಿತ್ತ ಸಚಿವ ನಿರ್ಮಲ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನ ಲೋಕಸಭೆ ಕಲಾಪದಲ್ಲಿ ಕೇಂದ್ರ ಬಜೆಟ್ಅನ್ನು ಮಂಡಿಸಿದರು. ಈ ಬಾರಿಯ ಬಜೆಟ್ ನಲ್ಲಿ ತಂತ್ರಜ್ಞಾನ ವಲಯಕ್ಕೆ ಮತ್ತು ತಂತ್ರಜ್ಞಾನ ಬಳಕೆಗೆ ಬಹಳ ಪ್ರಾಮುಖ್ಯತೆ ಕೊಟ್ಟಿದೆ ಎಂಬುದು ನಮಗೆ ತಿಳಿದು ಬರುತ್ತದೆ. ಇದರಲ್ಲಿ ಜನರ ಗಮನ ಸೆಳೆದ ವಿಷಯವೆಂದರೆ ಈ ಪಾಸ್ಪೋರ್ಟ್ (E- Passport). ಈ ಪಾಸ್ಪೋರ್ಟ್(E- Passport) ಎಂದರೇನು ಮತ್ತು ಅದರ ವಿಶೇಷತೆಗಳ ಬಗ್ಗೆ ಜನರಲ್ಲಿ ಬಹಳ ಕುತೂಹಲ ಮೂಡಿದೆ. ಇದರ ಕುರಿತು ಕೆಲವು ವಿವರಗಳು ಕೆಳಕಂಡಂತೆ ಇವೆ.

ಈ ಪಾಸ್ಪೋರ್ಟ್(E- Passport) ಸಾಂಪ್ರದಾಯಿಕ ಪಾಸ್ಪೋರ್ಟ್ ಗಳಂತೆಯೇ ಕೆಲಸ ಮಾಡುತ್ತದೆ ಆದರೆ ಎಂಬೆಡೆಡ್ ಚಿಪ್ ಗಳು ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಹೇಳಿದ್ದರು. ಇದರಲ್ಲಿ ಮೈಕ್ರೋಚಿಪ್ ಗಳನು ಅಳವಡಿಸಿರುವುದರಿಂದ ಭದ್ರತಾ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಇದರಲ್ಲಿ ಹೆಸರು, ಬಯೊಮೇಟ್ರಿಕ್ ಡೇಟಾ ಮತ್ತು ಇತರ ಮಾಹಿತಿಯಂತಹ ಪಾಸ್ಪೋರ್ಟ್ ಹೊಂದಿರುವವರಿಗೆ ಸಂಬಂದಿಸಿದ್ಧ ಮಹತ್ವದ ಡೇಟಾವನ್ನು ಒಳಗೊಂಡಿರುತ್ತದೆ. ಇದು ಪ್ರಯಾಣಿಕರಿಗೆ ಅತ್ಯಂತ ಉಪಯೋಗಕರ ವಾಗಲಿದೆ ಮತ್ತು ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇರುವುದಿಲ್ಲ. ಈ ಪಾಸ್ಪೋರ್ಟ್ ಅನ್ನು ಇಮಿಗ್ರೇಷನ್ ಕೌಂಟರ್ ನಲ್ಲಿ ಬೌತಿಕ ಪರಿಶೀಲನೆಗೆ ನಿಮಿಷಗಳಲ್ಲಿ ಸ್ಕ್ಯಾನ್ ಮಾಡಬಹುದು.

ಈ ಪಾಸ್ಪೋರ್ಟ್ ನ ಕೆಲವು ಉಪಯೋಗಗಳು
• ಇದು ವ್ಯಕ್ತಿಗಳ ಕೆಲವು ದಾಖಲೆಗಳನ್ನು ಹೊಂದಿದೆ ಆದ್ದರಿಂದ ವಂಚಕರು ಡೇಟಾ ಪೈರಸಿ ನಡೆಸುವುದರಿಂದ ಮತ್ತು ನಕಲಿ ಪಾಸ್ಪೋರ್ಟ್ ಗಳನ್ನೂ ಮಾಡುವುದನ್ನು ತಡೆಯುತ್ತದೆ.
• ಟ್ಯಾಮ್ ಪರಿಂಗ್ ನಲ್ಲಿ ಚಿಪ್ ಪಾಸ್ಪೋರ್ಟ್ ಧೃಡೀಕರಣವು ವಿಫಲಗೊಳ್ಳುತ್ತದೆ.
• ಯಾರು ಅದರಿಂದ ಡೇಟಾ ಅಳಿಸಲು ಸಾಧ್ಯವಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top