fbpx
ಸಮಾಚಾರ

ಕ್ರೂರ ತಾಯಿ: 3 ವರ್ಷದ ಕಂದನನ್ನು ಝೂನಲ್ಲಿ ಕರಡಿ ಇದ್ದ ಗೂಡಿಗೆ ಎಸೆದ ತಾಯಿ, ವಿಡಿಯೋ ವೈರಲ್

ಈ ವಿಡಿಯೋ ನೋಡುದ್ರೆ ಒಂದು ಕ್ಷಣ ಎದೆ ಝಲ್ ಅನಿಸುತ್ತೆ. ಯಾಕಂದ್ರೆ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಕರಡಿಗೆ ಬಾಯಿಗೆ ನೀಡಿ ಕ್ರೂರತನ ಮೆರೆದಿದ್ದಾಳೆ. ಈ ಘಟನೆ ಉಜ್ಬೇಕಿಸ್ತಾನದ ಮೃಗಾಲಯವೊಂದರಲ್ಲಿ ನಡೆದಿದೆ. ಈ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ವಿಡಿಯೋ ನೋಡಿದ ಮಂದಿ ತಾಯಿಯ ರಕ್ಕಸತನ ಕಂಡು ದಂಗಾಗಿದ್ದಾರೆ.

 

 

ತಾಯಿ ಮಗುವನ್ನು ಕರಡಿಗಳಿರುವ ಪ್ರದೇಶದ ಸುತ್ತಲು ಹಾಕಿದ್ದ ಕಂಬಿಗಳ ಮೇಲಿನಿಂದ ಸುಮಾರು 16 ಅಡಿ ಕೆಳಗಿನ ಕಂದಕಕ್ಕೆ ಎಸೆಯುವುದು ವೀಡಿಯೊದಲ್ಲಿ ಕಾಣಿಸುತ್ತಿದೆ. ಈ ವೇಳೆ ಗೂಡಿನಲ್ಲಿ ಜುಜು ಎಂಬ ಒಂದು ಕಂದು ಬಣ್ಣದ ಕರಡಿ ಇತ್ತು. ಮಗು ಕೆಳಗೆ ಬೀಳುತ್ತಿದ್ದಂತೆ ಕರಡಿ ಅದರ ಬಳಿ ಓಡಿ ಹೋಗುತ್ತದೆ. ಜೊತೆಗೆ ಸುತ್ತಲಿದ್ದವರು ಕೂಡ ಕರಡಿ ಇದ್ದ ಸ್ಥಳಕ್ಕೆ ಬಂದು ಮಗುವನ್ನು ಎತ್ತಿ ಕರೆದೊಯ್ಯುತ್ತಾರೆ.

ವರದಿಯ ಪ್ರಕಾರ ಮಗುವಿಗೆ ಬಿದ್ದ ಗಾಯಗಳಾಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಆಗಲಿದೆ. ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಮಗುವನ್ನು ಎಸೆಯುವ ತಾಯಿಯೂ ಇದ್ದಾಳಾ ಎಂದು ನೆಟ್ಟಿಗರು ಕಾಮೆಂಟ್​ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top