fbpx
ಸಮಾಚಾರ

ಡಾ.ರಾಜ್ ತೀರಿಕೊಂಡ ಮೇಲೆ ‘ದೊಡ್ಮನೆ’ ಎರಡು ಭಾಗವಾಗಿದ್ದು ಏಕೆ? ಹಳೆ ನೆನಪು ಹಂಚಿಕೊಂಡ ರಾಘಣ್ಣ!

ಕನ್ನಡ ಚಿತ್ರರಂಗದಲ್ಲಿ ‘ದೊಡ್ಮನೆ’ ಎಂದೇ ಪ್ರಖ್ಯಾತರಾಗಿರುವುದು ವರನಟ ಡಾ. ರಾಜಕುಮಾರ್ ಅವರ ಕುಟುಂಬ. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ಮನೆಯಲ್ಲಿ ಅಣ್ಣಾವ್ರ ತುಂಬು ಕುಟುಂಬ ಒಟ್ಟಾಗಿ ವಾಸವಿದ್ದರು. ಚಿತ್ರರಂಗದಲ್ಲಿ ಯಾರಿಗೆ ಏನೇ ಸಮಸ್ಯೆಯಾದರೂ ಅವರೆಲ್ಲಾ ಅಣ್ಣಾವ್ರ ಆ ಮನೆಗೆ ಹೋಗಿ ಪರಿಹಾರ ಪಡೆದುಕೊಂಡು ಬರುತ್ತಿದ್ದರು.

ಆದರೆ ಅಣ್ಣಾವ್ರು ಕಾಲವಾದ ಮೇಲೆ ಆ ಮನೆಯನ್ನು ಎರಡು ಭಾಗವನ್ನಾಗಿ ಮಾಡಲಾಯಿತು. ಇನ್ನು ಹಿರಿ ಮಗ ಶಿವಣ್ಣ ಕೂಡ ಬೇರೆ ಮನೆ ಕಟ್ಟಿಸಿಕೊಂಡು ಹೋದರು. ಒಟ್ಟಿಗೆ ಅನ್ಯೋನ್ಯವಾಗಿ ಇದ್ದ ಅಣ್ಣಾವ್ರ ಕುಟುಂಬ ಹೀಗೆ ಬೇರೆ ಬೇರೆಯಾಗಲು ಕಾರಣವೇನು ಎಂದು ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿದ್ದವು. ಈ ಬಗ್ಗೆ ಯಾರೊಬ್ಬರೂ ಮಾತನಾಡಿರಲಿಲ್ಲ. ಆದರೆ ಇದೀಗ ನಟ ರಾಘವೇಂದ್ರ ರಾಜಕುಮಾರ್ ಅವರು ಈ ಕುರಿತಾಗಿ ಮಾತನಾಡಿದ್ದಾರೆ.

ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್ ಹಾಗೂ ನಾಗೇಂದ್ರ ಪ್ರಸಾದ್ ಸೇರಿ ಪುನೀತ್ ಗೆ ನಮನ ಸಲ್ಲಿಸುವ ಸಲುವಾಗಿ ಗೀತೆಯೊಂದನ್ನು ರಚಿಸಿದ್ದರು. ಈ ಹಾಡನ್ನು ಬಿಡುಗಡೆಗೊಳಿಸಲು ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿತ್ತು. ಈ ಈ ಕಾರ್ಯಕ್ರಮದಲ್ಲಿ ರಾಘಣ್ಣ ಕೂಡ ಭಾಗವಹಿಸಿ ಕೆಲ ನೆನಪುಗಳನ್ನು ಹಂಚಿಕೊಂಡರು. ಈ ವೇಳೆ ತಾವೆಲ್ಲಾ ಬೇರೆ ಬೇರೆಯಾಗಿದ್ದು ಯಾಕೆ ಎಂಬ ವಿಚಾರವನ್ನು ಸಹ ಹೇಳಿದರು..

“ತಂದೆಯವರಿದ್ದಾಗ ನಮ್ಮದು ಒಂದೇ ಮನೆ ಇತ್ತು. ಅದು ಬಹಳ ದೊಡ್ಡ ಮನೆ. ಆದರೆ ಅದನ್ನು ಈಗ ನಾವು ಎರಡು ಮನೆಯನ್ನಾಗಿ ಮಾಡಿದ್ದೇವೆ. ಅದನ್ನು ನಮ್ಮ ತಾಯಿ ಮಾಡಿಕೊಟ್ಟಿದ್ದು. ನಾನು ಇದ್ದಾಗಲೇ ಇದು ಆಗಿಬಿಡಲಿ, ನಾನು ಹೋದ ಮೇಲೆ ನೀವು ಬೇರೆಯಾದರೆ ಆಸ್ತಿಗೋಸ್ಕರ ಹೀಗೆ ಮಾಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ ಎಂದು ಹೇಳಿ ಒಂದು ಮನೆಯನ್ನು ಎರಡು ಮನೆಯನ್ನಾಗಿ ಮಾಡಿಕೊಟ್ಟರು. ಒಂದು ನನಗೆಂದು, ಒಂದು ಪುನೀತ್ ಗೆಂದು ನೀಡಿದರು ಎಂದು ಹಳೆಯ ಘಟನೆಯ ಬಗ್ಗೆ ನೆನಪಿಸಿಕೊಳ್ಳುತ್ತಾ ಅಭಿಮಾನಿಗಳ ಮನಸಿನಲ್ಲಿದ್ದ ದೀರ್ಘಕಾಲದ ಅನುಮಾನಕ್ಕೆ ತೆರೆ ಎಳೆದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top