fbpx
ಸಮಾಚಾರ

ಮಗಳನ್ನು ಮನೆಗೆ ಸ್ವಾಗತಿಸಲು ಪ್ರಿಯಾಂಕಾ ಚೋಪ್ರಾ ದಂಪತಿ 149 ಕೋಟಿ ಖರ್ಚು ಮಾಡಿದ್ರಂತೆ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಸಾಮಾಜಿಕ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ತಮ್ಮ ಮುದ್ದು ಮಗಳನ್ನು ಗೃಹ ಪ್ರವೇಶಕ್ಕಾಗಿ ಪ್ರಿಯಾಂಕಾ ಚೋಪ್ರಾ ದಂಪತಿ ಬರೋಬ್ಬರಿ ೧೪೯ ಕೋಟಿ ರೂ ಖರ್ಚು ಮಾಡಿದೆ ಎಂದು “ಪೀಪಲ್ ಮ್ಯಾಗಝಿನ್” ವರದಿ ಮಾಡಿದೆ. ವರದಿಯ ಪ್ರಕಾರ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಅವರು ಮಗುವಿನ ಬಗ್ಗೆ ಯೋಚಿಸಲು ಪ್ರಾರಂಭ ಮಾಡಿದ ದಿನದಿಂದಲೂ ಅವರು ಹೊಸ ಮನೆಯನ್ನು ಹುಡುಕಲು ಪ್ರಾರಂಭಿಸಿದರು. ಇವರು ನವೆಂಬರ್ ೨೦೧೯ ರಲ್ಲಿ ತಮ್ಮ ಹೊಸ ಮನೆಯನ್ನು ಖರೀದಿಸಿದ್ದರು.

ತಮ್ಮ ಮಗುವಿಗೆ ಆಟವಾಡಲು ಸಾಕಷ್ಟು ಹೊರಾಂಗಣ ಸ್ಥಳ ಮತ್ತು ಹಸಿರು ಬೇಕೆಂದು ಭಾವಿಸಿ ಅವರು ಆ ಮನೆಯನ್ನು ಸಾಕಷ್ಟು ನವೀಕರಣ ಗೊಳಿಸಿದ್ದರು. ಆ ಮನೆಗಾಗಿ ಅವರು ವ್ಯಯಿಸಿದ ಮೊತ್ತ ಬರೋಬ್ಬರಿ 20 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು 149 ಕೋಟಿ ರೂಪಾಯಿ ಎನ್ನಲಾಗಿದೆ.

ಅಂದಹಾಗೆ ಆದರೆ ಇಲ್ಲಿಯವರೆಗೂ ಪ್ರಿಯಾಂಕಾ ಮತ್ತು ನಿಕ್ ದಂಪತಿಯವರು ತಮ್ಮ ಮಗುವಿನ ಚಿತ್ರವನ್ನು ಎಲ್ಲಿಯೂ ಪ್ರಕಟಿಸಿಲ್ಲ. ಆದರೆ ಅಭಿಮಾನಿಗಳು ಮಾತ್ರ ಮಗುವಿಗೆ ತಮ್ಮ ಪ್ರೀತಿ ಮತ್ತು ಹಾರೈಕೆಯನ್ನು ತೋರಿಸುತ್ತಿದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top