fbpx
ಸಮಾಚಾರ

ಸ್ಯಾಂಡಲ್‌ವುಡ್‌ಗೆ ಗುಡ್ ನ್ಯೂಸ್ ಕೊಟ್ಟ ಬೊಮ್ಮಾಯಿ ಸರ್ಕಾರ

ಚಂದನವನಕ್ಕೆ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಕೋವಿಡ್ ಮೂರನೇ ಅಲೆಯ ಆತಂಕದಿಂದಾಗಿ ಚಿತ್ರಮಂದಿರಗಳ ಮೇಲೆ ಹೇರಿದ್ದ 50% ಆಸನ ನಿರ್ಬಂಧವನ್ನು ಕರ್ನಾಟಕ ಸರ್ಕಾರ ಇಂದು ವಾಪಸ್ ಪಡೆದಿದೆ. ನಾಳೆಯಿಂದಲೇ (ಫೆಬ್ರವರಿ 5) ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿದೆ. ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.

ಕಳೆದ ವಾರ ಚಲನಚಿತ್ರ ವಾಣಿಜ್ಯ ಮಂಡಳಿ ನಿಯೋಗ ಸಿಎಂರನ್ನು ಭೇಟಿ ಮಾಡಿ ಶೇ 100ರಷ್ಟು ಭರ್ತಿಗೆ ಅವಕಾಶ ಮಾಡಿಕೊಡುವಂತೆ ಮನವಿ ಸಲ್ಲಿಸಿದ್ದರು. ಇಂದು ಈ ಬಗ್ಗೆ ಚರ್ಚೆ ನಡಸಿದ ಸಿಎಂ ನಾಳೆಯಿಂದ ಚಿತ್ರಮಂದಿಗಳಲ್ಲಿ ಹೌಸ್ ಫುಲ್​ ಪ್ರದರ್ಶನಕ್ಕೆ ಅವಕಾಶ ನೀಡಿದ್ದಾರೆ.

ಚಲನಚಿತ್ರ ಮಂದಿರದೊಳಗೆ ಹೋಗುವವರು ಕಡ್ಡಾಯ ಮಾಸ್ಕ್ ಧರಿಸಬೇಕು, ಎರಡು ಡೋಸ್ ಲಸಿಕೆ ಕಡ್ಡಾಯವಾಗಿರುತ್ತದೆ. ತಿಂಡಿ ಪದಾರ್ಥಗಳನ್ನ ಥಿಯೇಟರ್ ಒಳಗೆ ತೆಗೆದುಕೊಂಡು ಹೋಗಲು ನಿಷೇಧ ಹೇರಲಾಗಿದೆ. ವಿರಾಮದ ಸಂದರ್ಭದಲ್ಲಿ ಹೊರಗೆ ಬಂದು ತಿನ್ನಬಹುದು. ಕಟ್ಟುನಿಟ್ಟಿನ ಪರಿಶೀಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top