fbpx
ಸಮಾಚಾರ

ಸಾಲುಮರದ ತಿಮ್ಮಕ್ಕರಂತಹ ಪರಿಸರ ಸಂರಕ್ಷಕರ ಚಿಕಿತ್ಸೆಗೆ ಸಂಸದ ಜಿಸಿ ಚಂದ್ರಶೇಖರ್ ಸರ್ಕಾರಕ್ಕೆ ಮನವಿ

ಪದ್ಮಶ್ರೀ ಪ್ರಶಸ್ತಿ ವಿಜೇತ ಸಾಲುಮರದ ತಿಮ್ಮಕ್ಕ ಅವರು ಕಳೆದ ವರ್ಷ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೇ ಪರದಾಡಿದ ಪ್ರಸಂಗವೊಂದು ನಡೆದಿತ್ತು. ತಮ್ಮ ಜೀವನವನ್ನೇ ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟ ವೃಕ್ಷಮಾತೆಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ಒಂದು ಸೂಕ್ತ ಹಾಸಿಗೆ ವ್ಯವಸ್ಯೆಯಾಗದಿದ್ದುದು ನಿಜಕ್ಕೂ ದುರದೃಷ್ಟಕರ ಸಂಗತಿ.

ಸಾಲುಮರದ ತಿಮ್ಮಕ್ಕ ಅವರನ್ನೂ ಒಳಗೊಂಡಂತೆ ಹೀಗೆ ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಪರಿಸರ ಪ್ರೇಮಿಗಳ ಆರೋಗ್ಯವನ್ನು ನೋಡಿಕೊಳ್ಳುವುದು ಸರ್ಕಾರವೂ ಸೇರಿದಂತೆ ನಮ್ಮೆಲರ ಜವಾಬ್ದಾರಿ. ಈ ನಿಟ್ಟಿನಲ್ಲಿ ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ಇಂದು ಸದನದಲ್ಲಿ ಪ್ರಸ್ತಾಪಿಸಿದ್ದಾರೆ.

 

 

“ಕರ್ನಾಟಕದಲ್ಲಿ ಪರಿಸರವಾದಿ ಎಂದೇ ಗುರುತಿಸಿಕೊಂಡಿರುವ 106 ವರ್ಷದ ಪದ್ಮ ಪ್ರಶಸ್ತಿ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ. ಅವರು 65 ವರ್ಷಗಳಲ್ಲಿ ಹುಲಿಕಲ್ ಮತ್ತು ಕುದೂರು ನಡುವಿನ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು ನಾಲ್ಕು ಕಿ.ಮೀವರೆಗೆ ಎಂಟು ಸಾವಿರಕ್ಕೂ ಹೆಚ್ಚು ಆಲದ ಮರಗಳನ್ನು ಬೆಳೆಸಿದ್ದಾರೆ. ಇಂತಹ ವೃಕ್ಷಮಾತೆ ಇತ್ತೀಚಿಗೆ ಅವರು ಕೆಲವೊಂದು ಅರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.”

“ಸಾಲುಮರದ ತಿಮ್ಮಕ್ಕ ಮತ್ತು ಅವರ ರೀತಿಯ ಪರಿಸರ ಸಂರಕ್ಷಕರು ಯಾವುದೇ ರೀತಿಯ ಅರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೇ ಅಂಥವರಿಗೆ ಅರಣ್ಯ ಮತ್ತು ಪರಿಸರ ಇಲಾಖೆಯ ಸೂಕ್ತ ನಿಯಮಗಳ ಅಡಿಯಲ್ಲಿ ಉಚಿತ ಚಿಕಿತ್ಸೆ ನೀಡಲು ಅವಕಾಶ ಮಾಡಿಕೊಡಬೇಕು” ಎಂದು ರಾಜ್ಯಸಭಾ ಸದಸ್ಯರಾದ ಜಿಸಿ ಚಂದ್ರಶೇಖರ್ ಅವರು ಅರಣ್ಯ ಮತ್ತು ಪರಿಸರ ಇಲಾಖೆಯ ಸಚಿವರಲ್ಲಿ ಮನವಿ ಮಾಡಿಕೊಂಡಿರುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top