fbpx
ಸಮಾಚಾರ

ಸೈಟ್ ಕೊಡಿಸೋದಾಗಿ ನಕಲಿ ದಾಖಲೆ ಸೃಷ್ಟಿಸಿ ನಿರ್ದೇಶಕ ಎಸ್ ನಾರಾಯಣ್ ಗೆ ವಂಚನೆ

ಸಿನಿಮಾ ಮಾಡ್ತೀವಿ ಎಂದು ಬಂದ ಐದು ಜನರಿಂದ ಖ್ಯಾತ ನಿರ್ದೇಶಕ, ನಟ ಎಸ್​.ನಾರಾಯಣ್​ ವಂಚನೆಗೆ ಒಳಗಾಗಿದ್ದಾರೆ. ಈ ಸಂಭಂದ ಕನ್ನಡದ ಖಾಸಗಿ ವಾಹಿನಿಯೊಂದು ವರದಿ ಮಾಡಿದ್ದು ವರದಿಯ ಪ್ರಕಾರ ಈ ಘಟನೆ ಎರಡೂವರೆ ವರ್ಷ ಹಳೆಯದಾಗಿದೆ.

ಸೈಟ್ ಕೊಡಿಸುವುದಾಗಿ ನಕಲಿ ದಾಖಲೆ ಸೃಷ್ಟಿಸಿ ನಟ ಹಾಗೂ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಮೋಸ ಮಾಡಲಾಗಿದೆ. ಈ ಬಗ್ಗೆ ಒಂದು ವರೆ ವರ್ಷದ ಹಿಂದೆಯೇ ಎಸ್ ನಾರಾಯಣ್ ದೂರು ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಳ್ಳದೇ ಇದ್ದಿದ್ದರಿಂದ ಇದೀಗ ನನಗೆ ನ್ಯಾಯ ಕೊಡಿಸಿ ಎಂದು ಎಸ್ ನಾರಾಯಣ್ ಅವರು ಸಿಸಿಬಿ ಮೊರೆ ಹೋಗಿದ್ದಾರೆ.

ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಎಸ್.ನಾರಾಯಣ್ “ಈ ಹಿಂದೆ ಸಿನಿಮಾ ಮಾಡೋಣ ಎಂದು ನಾಲ್ವರು ಆರೋಪಿಗಳು ನಂಬಿಸಿದ್ದರು. ಇದರಂತೆ ನಾಲ್ಕು ದಿನಗಳ ಕಾಲ ಶೂಟಿಂಗ್ ಆಗಿತ್ತು. ಬಳಿಕ ನಿಂತು ಹೋಗಿತ್ತು. ಹಣಕಾಸಿನ ಮುಗ್ಗಟ್ಟಿನಿಂದ ನಮ್ಮ ಬಳಿ ಸೈಟ್ ಇದ್ದು ಅದನ್ನು ಮಾರಿ ಸಿನಿಮಾ ಮಾಡೋಣ ಎಂದು ಆರೋಪಿಗಳು ಭರವಸೆ ನೀಡಿದ್ದರು.”

“ನಂತರ ನನಗೆ ನಿವೇಶನ ಖರೀದಿಸುವಂತೆ ಹೇಳಿದ್ದರು. ಇದನ್ನು ನಂಬಿ ಬ್ಯಾಂಕ್​ನಿಂದ ಸಾಲ ಪಡೆದು ಸೈಟ್ ಖರೀದಿಸಿದ್ದೆ. ಹಣ ಪಡೆದುಕೊಂಡ‌ ಆರೋಪಿಗಳು ಸಿನಿಮಾ ಶುರು ಮಾಡದೆ, ಹಣ‌‌ ನೀಡದೆ‌ ಸತಾಯಿಸುತ್ತಿದ್ದರು. ಬ್ಯಾಂಕ್​ಗೆ ಸಾಲ ಕಟ್ಟಲು‌ ಸಾಧ್ಯವಾಗದ‌ ಪರಿಣಾಮ ಸೈಟ್ ಮಾರಲು‌ ಮುಂದಾಗಿದ್ದೆ. ಸೈಟ್ ಮಾರಾಟಕ್ಕೆ ಮುಂದಾದಾಗ ಬಿಡಿಎ ನಿವೇಶನ ಎಂದು ಗೊತ್ತಾಗಿದೆ.‌ ವಂಚಕರು ನೀಡಿದ ದಾಖಲಾತಿ ಪತ್ರಗಳು ನಕಲಿ ಎಂದು ಗೊತ್ತಾಗಿದೆ. ಈ ಸಂಬಂಧ ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಪ್ರಕರಣ ಸಿಸಿಬಿಗೆ ವರ್ಗಾವಣೆ ಆಗಿತ್ತು” ಎಂದು ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top