fbpx
ಸಮಾಚಾರ

ಮಗಳೊಂದಿಗೆ ಪರೀಕ್ಷೆ ಬರೆದು MBBS ಸೀಟು ಪಡೆದ ತಂದೆ: ಇಲ್ಲಿದೆ ಕುತೂಹಲಕಾರಿ ಸಂಗತಿ

ತಿರುವಂತಪುರಂನಲ್ಲಿ ಅಪ್ಪ ಮಗಳು ಇಬ್ಬರು ಒಟ್ಟಿಗೆ ನೀಟ್ ಪರೀಕ್ಷೆ ಬರೆದು ಉತ್ತಿರ್ಣರಾಗಿ ಎಂ.ಬಿ.ಬಿ.ಎಸ್ ಸೀಟ್ ಪಡೆದಿರುವುದು ಒಂದು ಅಚ್ಚರಿಯ ಸಂಗತಿ ಯಾಗಿದೆ.

ಎರ್ನಾಕುಲಂ ಜಿಲ್ಲೆಯ ಟ್ರಿಪ್ಪುನಿತುರದ ೫೪ ರ ಹರೆಯದ ಆರ್ ಮುರುಗಯನ್ ಅವರು ಬಿ.ಪಿ.ಸಿ.ಎಲ್(ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್) ಕೊಚ್ಚಿ ರಿಫೈನರಿ ಅಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮುರುಗಯನ್ ಅವರಿಗೆ ಚೆನೈ ನ ಶ್ರೀ ಲಲಿತಾಂಬಿಕಾ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಮಗಳು ಶೀತಲ್ ಅವರಿಗೆ ಪಾಂಡಿಚೆರಿಯ ವಿನಾಯಕ ಮಿಷನ್ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಸಿಕ್ಕಿದೆ.

ಮುರುಗಯನ್ ಅವರು ತಾನು ಚಿಕ್ಕವಯಸ್ಸಿನಲ್ಲೇ ವೈದ್ಯನಾಗಬೇಕೆಂಬ ಆಸೆಯನ್ನು ಹೊಂದಿದೆ ಆದರೆ ಮನೆಯವರ ಒತ್ತಾಯಕ್ಕೆ ಮಣಿದು ನಾನು ಎಂಜಿನೀರಿಂಗ್ ಪದವಿಯನ್ನು ಪಡೆದೆ. ನನ್ನ ಮತ್ತು ನನ್ನ ಮಗಳಿಗೆ ಎಂ.ಬಿ.ಬಿ.ಎಸ್ ಸೀಟು ದೊರೆತಿದ್ದು ಬಹಳ ಸಂತೋಷಕರ ವಿಷಯ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಯಿಸಿದ ಮುರುಗಯನ್ ಅವರ ಪತ್ನಿ, ಇಬ್ಬರು ಒಟ್ಟಿಗೆ ಓದುತ್ತಿದ್ದು ಆದರೆ ಅಪ್ಪನಿಗೆ ಓದಿದ್ದು ಬೇಗ ಅರ್ಥವಾಗುತ್ತಿತ್ತು. ನನ್ನ ಮಗಳಿಗಿಗೆ ಇದ್ದ ಆತಂಕ ವೇನೆಂದರೆ ನಮ್ಮ ಅಪ್ಪನಿಗೆ ಸೀಟು ಸಿಕ್ಕಿ ನನಗೆ ಸಿಗದೇ ಇದ್ದರೆ ಎಂದು, ಆದರೆ ಇಬ್ಬರಿಗೆ ವೈದ್ಯಕೀಯ ಸೀಟು ಸಿಕ್ಕಿದು ಬಹಳ ಸಂತೋಷಕರ ವಿಷಯವೆಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top