fbpx
ಸಮಾಚಾರ

ಇದು ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಸಾಮರ್ಥ್ಯ 27,000,000mAh? ಬೆಲೆ ಎಷ್ಟು?

ಆಧುನಿಕ ಯುಗದಲ್ಲಿ ಜನರು ಮೊಬೈಲ್ ಬಳಕೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಆದರೆ ಈಗಿನ ಮೊಬೈಲ್ ಗಳು ಹೆಚ್ಚಿನ ಸಮಯ ಚಾರ್ಜ್ ನಿಲ್ಲದೇ ಇರುವ ಕಾರಣ ಜನರು ಪವರ್ ಬ್ಯಾಂಕನ್ನು ಬಳಸುತ್ತಿದ್ದಾರೆ. ಇದರಿಂದ ಜನರು ತಮ್ಮ ಮೊಬೈಲ್ ಅನ್ನು ಪಕ್ಕದಲ್ಲೇ ಇಟ್ಟುಕೊಂಡು ಚಾರ್ಜ್ ಮಾಡಬಹುದು. ಇದು ಪ್ರಯಾಣಿಕರಿಗೆ ಹೆಚ್ಚು ಉಪಯೋಗವಾಗುತ್ತದೆ.

ಈ ಪವರ್ ಬ್ಯಾಂಕ್ ಎನ್ನುವುದು ಇತ್ತೀಚಿನ ದಿನಗಳಲ್ಲಿ ಬಹಳ ಸುದ್ದಿಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಚೀನಾದ ಓರ್ವ ವ್ಯಕ್ತಿ. ಈತ ವಿಶ್ವದ ಅತ್ಯಂತ ದೊಡ್ಡ ಸಾಮರ್ಥ್ಯ ಇರುವ ಒಂದು ಪವರ್ ಬ್ಯಾಂಕನ್ನು ತಯಾರಿಸಿದ್ದಾನೆ.

ಅಚ್ಚರಿಯ ವಿಷಯವೇನೆಂದರೆ ಇದರಲ್ಲಿ ಬರೋಬರಿ ೫ ಸಾವಿರಕ್ಕಿಂತಲೂ ಹೆಚ್ಚು ಸ್ಮಾರ್ಟ್ಫೋನ್ ಅನ್ನು ಒಂದೇ ಸಮನೆ ಚಾರ್ಜ್ ಮಾಡಬಹುದು. ಇದನ್ನು ಅವಿಷ್ಕಾರಗೊಳಿಸಿರುವದು ಚೀನಾದ ಹ್ಯಾಂಡಿ ಗೆಂಗ್ ಎಂಬ ವ್ಯಕ್ತಿ. ಜನವರಿಯಲ್ಲಿ ಅವರು ತಾವು ತಯಾರಿಸಿದ್ದ ಪವರ್ ಬ್ಯಾಂಕ್ ವಿಡಿಯೋ ವನ್ನು ಅಪ್ಲೋಡ್ ಮಾಡಿ ಅದರ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.

ಇದು ಸುಮಾರು ೨೭,೦೦೦,೦೦೦ ಎಂ. ಎ.ಎಚ್ ಸಾಮರ್ಥ್ಯ ಹೊಂದಿದ್ದು ಇದು ೩೦೦೦ ಎಂ.ಎ.ಎಚ್ ಬ್ಯಾಟರಿ ಗಳೊಂದಿದೆ ೫೦೦೦ ಸ್ಮಾರ್ಟ್ಫೋನ್ ಅನ್ನು ಚಾರ್ಜ್ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಮಾರಾಟಕ್ಕೆ ಲಭ್ಯವಾಗದೇ ಇರುವ ಕಾರಣ ಇದರ ಬೆಲೆಯನ್ನು ಇವರು ಪ್ರಕಟಿಸಿಲ್ಲ.

ಈ ಪವರ್ ಬ್ಯಾಂಕ್ ೫.೯*೩.೯ ಅಡಿ ಉದ್ದವಿದ್ದು ಇದರಲ್ಲಿ ೬೦ ಪೋರ್ಟ್ ಗಳನ್ನು ಒಳಗೊಂಡಿದೆ. ಅದರ ಔಟ್ಪುಟ್ ಚಾರ್ಜಿಂಗ್ ಕನೆಕ್ಟರ್ ಗಳ ಮೂಲಕ ೨೨೦ v ವಿದ್ಯುತ್ ವೋಲ್ಟೇಜ್ ಅನ್ನು ಬೆಂಬಲಿಸುತ್ತದೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಟಿವಿ, ವಾಷಿಂಗ್ ಮೆಷಿನ್ ನಂತಹ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಸಹ ಚಾರ್ಜ್ ಮಾಡಬಹುದು.

ಈ ಎಲೆಕ್ಟ್ರಾನಿಕ್ ಪವರ್ ಬ್ಯಾಂಕ್ ಅನ್ನು ಸಾಗಿಸಲು ಚಕ್ರಗಳನ್ನು ಜೋಡಿಸಲಾಗಿದೆ. ಇದು ಗಾತ್ರದಲ್ಲಿ ಬಹಳ ದೊಡ್ಡದಾಗಿರುವ ಕಾರಣ ಪ್ರಯಾಣದ ಸಮಯದಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇದು ಮನೆಯ ಬಳಕೆಗೆ ಉಪಯೋಗಿಸಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top