ತೆಲುಗಿನ ಸೂಪ್ಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟ ತೆಲುಗು ಕಾಮಿಡಿಯನ್ ರಾಹುಲ್ ರಾಮಕೃಷ್ಣ ಸಿನಿಮಾ ಕ್ಷೇತ್ರದಿಂದ ಹೊರಹೋಗುತ್ತಿರುವುದಾಗಿ ತಿಳಿಸಿದ್ದಾರೆ. ಶುಕ್ರವಾರ (ಫೆಬ್ರವರಿ 4) ರಾತ್ರಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಶಾಕ್ ಆಗಿದ್ದಾರೆ.
2022 is my last.
I will not do films anymore.
Not that I care, nor should anybody care— Rahul Ramakrishna (@eyrahul) February 4, 2022
‘ಈ ವರ್ಷವೇ ಕೊನೆ. ಆ ಬಳಿಕ ನಾನು ಯಾವುದೇ ಸಿನಿಮಾ ಮಾಡುವುದಿಲ್ಲ. ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಈ ಬಗ್ಗೆ ಚಿಂತಿಸಬೇಡಿ’ ಎಂದು ಬರೆದು ರಾಹುಲ್ ಟ್ವೀಟ್ ಮಾಡಿದ್ದಾರೆ. ಈಗ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ರಾಹುಲ್ ಹಿಂದೆ ಸರಿಯಲು ಕಾರಣ ಏನೆಂಬುದನ್ನ ರಾಹುಲ್ ತಿಳಿಸಿಲ್ಲ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಅರ್ಜುನ್ ರೆಡ್ಡಿ ಸಿನಿಮಾ ನಂತರ ರಾಹುಲ್ ಅವರಿಗೆ ಚಿತ್ರರಂಗದಲ್ಲಿ ಕೈತುಂಬಾ ಆಫರ್ ಗಳು ಬರಲಾರತೊಡಗಿದ್ದವು. ಅದರಂತೆ ರಾಹುಲ್ ಕೂಡ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿ ಒಳ್ಳೆಯ ಹೆಸರು ಗಳಿಸಿಕೊಂಡಿದ್ದಾರೆ. ಈಗಲೂ ಅವರಿಗೆ ಸಾಕ್ಷ್ಟು ಆಫರ್ ಗಳಿವೆ. ಬೇಡಿಕೆ ಇರುವಾಗಲೇ ನಟನೆಯಿಂದ ದೂರಸರಿಯಲು ರಾಹುಲ್ ನಿರ್ಧರಿಸಿರುವುದು ನಿಜಕ್ಕೂ ಸಿನಿಪ್ರೇಮಿಗಳಿಗೆ ಶಾಕ್ ತಂದಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
