fbpx
ಸಮಾಚಾರ

ನ್ಯೂಜಿಲೆಂಡ್ ಸ್ಟಾರ್ ಕ್ರಿಕೆಟಿಗನಿಗೆ ಮಾರಕ ಕಾಯಿಲೆ

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಕ್ರಿಸ್ ಕೇನ್ಸ್ ಅವರಿಗೆ ಮತ್ತೊಂದು ಮಾರಣಾಂತಿಕ ಕಾಯಿಲೆ ಎದುರಾಗಿದೆ. ಈ ಹಿಂದೆ ಕೇನ್ಸ್ ಕ್ಯಾನ್ಸರ್ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು ಜೊತೆಗೆ ನಾಲ್ಕು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಖುದ್ದು ಕೇನ್ಸ್ ಅವರೇ ಕರುಳಿನ ಕ್ಯಾನ್ಸರ್ ಇರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

51 ವರ್ಷ ವಯಸ್ಸಿನ ಮಾಜಿ ಆಟಗಾರ ಇತ್ತೀಚೆಗೆ ಕ್ಯಾನ್ಸರ್ ಗೆ ತುತ್ತಾಗಿದ್ದ ವೇಳೆ ಬೆನ್ನುಮೂಳೆಯ ಪಾರ್ಶ್ವವಾಯುವಿಗೆ ಒಳಗಾಗಬೇಕಾಯಿತು. ಇದರಿಂದಾಗಿ ಅವರ ಎಡಭಾಗವು ಪಾರ್ಶ್ವವಾಯುವಿಗೆ ತುತ್ತಾಗಿತ್ತು. ಈ ಎಲ್ಲಾ ಸಮಸ್ಯೆಗಳ ನಡುವೆ ಇದೀಗ ಕರುಳಿನ ಕ್ಯಾನ್ಸರ್ ಕೂಡ ಇರುವುದಾಗಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇನ್ಸ್ ” ನನ್ನ ಜೀವನದಲ್ಲಿ ಇನ್ನು ಮುಂದೆ ಇನ್ನೊಂದು ಹೋರಾಟ ಎದುರಾಗುತ್ತಿದೆ. ನನಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿದೆ. ನಾನು ಇನ್ನೂ ಜೀವಂತವಾಗಿದ್ದೇನೆ ಮತ್ತು ನಾನು ಎಷ್ಟು ಅದೃಷ್ಟಶಾಲಿ” ಎಂದು ಕ್ರಿಸ್ ಕೇನ್ಸ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಕ್ರಿಸ್ ಕೇನ್ಸ್ 1989 ರಿಂದ 2006 ರ ನಡುವೆ ನ್ಯೂಜಿಲೆಂಡ್‌ ಪರ 62 ಟೆಸ್ಟ್ ಮತ್ತು 215 ಏಕದಿನ ಪಂದ್ಯಗಳನ್ನು ಆಡಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top