fbpx
ಸಮಾಚಾರ

“ಹೆಣ್ಮಕ್ಕಳೇ ಅಡುಗೆ ಮಾಡ್ಬೇಕಾ? ಪಾತ್ರೆ ತೊಳಿಬೇಕಾ?” ಕೆಟ್ಟ ಕಾಮೆಂಟ್ ಮಾಡಿದವನಿಗೆ ನಿವೇದಿತಾ ಖಡಕ್ ಉತ್ತರ

ಕನ್ನಡ ಬಿಗ್ ಬಾಸ್ ಸೀಸನ್ ಐದರ ಪ್ರಮುಖ ಆಕರ್ಷಣೆಯಾಗಿ ಮನೆ ಮಾತಮಾತಾಗಿದ್ದ ಮೈಸೂರಿನ ಬೆಡಗಿ ನಿವೇದಿತಾ ಗೌಡ ಎಲ್ಲರಿಗೂ ಗೊತ್ತಿರೋಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.. ಅಸಲಿಗೆ ಡಬ್ ಸ್ಮಾಷ್ ಗಳ ಮೂಲಕ ವೈರಲ್ ಆಗಿಯೇ ಆಕೆ ಬಿಗ್ ಬಾಸ್ ವೇದಿಕೆಗೆ ಆಯ್ಕೆಯಾಗಿದ್ದು.. ಬಿಗ್ ಬಾಸ್ ನಲ್ಲೆ ಸಹ ಸ್ಪರ್ದಿಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿದ್ದ ನಿವೇದಿತಾ ಇತ್ತೀಚಿಗೆ ಟಿವಿ ಶೋಗಳಿಂದ ದೂರ ಉಳಿದು ಸಂಸಾರ ತಾಪತ್ರಯಗಳಲ್ಲಿ ಮುಳುಗಿಹೋಗಿದ್ದಾರೆ. ಈ ಮದ್ಯೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊಗಳನ್ನ ಹಂಚಿಕೊಳ್ಳೋ ಮೂಲಕ ಅಭಿಮಾನಿಗಳ ಜೊತೆ ಟಚ್ಚಲಿದ್ದಾರೆ ನಿವೇದಿತಾ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಚೆಲುವೆ ಇದೇ ಮೊದಲ ಬಾರಿ ವಿಡಿಯೋ ಮಾಡುವ ಮೂಲಕ ಕೆಟ್ಟ ಕಾಮೆಂಟ್ ಮಾಡುವವರಿಗ ಉತ್ತರ ನೀಡಿದ್ದಾರೆ. ಮಾಡುವೆ ಆದ ಮೇಲೆ ವಿಡಿಯೋ ಮಾಡುವುದನ್ನು ಮನೆ ಕೆಲಸ ನೋಡಿಕೊಳ್ಳಿ ಎಂದು ಕಾಮೆಂಟ್ ಮಾಡಿದ್ದ ನೆಟ್ಟಿಗನಿಗೆ ನಿವೇದಿತಾ ತಿರುಗೇಟು ನೀಡಿದ್ದಾರೆ.

ಮದುವೆ ಆದ ತಕ್ಷಣ ಹೆಣ್ಣು ಮಕ್ಕಳು ಬೇರೆ ಕೆಲಸ ಮಾಡಬಾರದ ? ಮದುವೆ ಆದ್ಮೇಲೆ ಬರಿ ಮನೆಯಲ್ಲಿ ಕುತ್ಕೊಂಡು ಅಡುಗೆ ಮಾಡಿಕೊಂಡು ಪಾತ್ರೆ ತೊಳಿತಾ ಇರಬೇಕಾ? ಅಷ್ಟೇನಾ ಹುಡುಗಿಯರ ಲೈಫ್​ ? ಇಲ್ಲ ಹೀಗೆ ಇರಬಾದರು. ಈ ಕಮೆಂಟ್​ ಹಾಕಿರೋದು ಕೂಡ ಒಬ್ಬರೂ ಹುಡುಗಿನೇ ಹೀಗಾಗಿ ನಿಮ್ಮಗೆ ಗೊತ್ತಿರಬೇಕು.. ಅಂತ ಹೇಳಿ ಈ ಕಮೆಂಟ್​ ಮಾಡಿದವರಿಗೆ ನಿವೇದಿತಾ ಟಾಂಗ್​ ನೀಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top