fbpx
ಸಮಾಚಾರ

“ನಮ್ಮದು ಅಕ್ರಮ ಆಸ್ತಿ ಅಲ್ಲ” ಆರೋಪದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಚನ್ನಣ್ಣನವರ್ ತಂದೆ ತಾಯಿ: ಹೇಳಿದ್ದೇನು ಗೊತ್ತಾ?

ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣವರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ರವಿ ಚನ್ನಣ್ಣನವರ್ ಭ್ರಷ್ಟಾಚಾರ ಮಾಡಿ ಕೋಟ್ಯಂತರ ರೂ ಬೆಲೆ ಬಾಳುವ ಅಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪ ಅವರ ವಿರುದ್ಧ ಕೇಳಿಬಂದಿತ್ತು. ಜೊತೆಗೆ ಅವರ ತಾಯಿಯ ಹೆಸರಿನಲ್ಲಿರುವ ಪಹಣಿಗಳ ಫೋಟೋವನ್ನು ಹಂಚಿಕೊಂಡು ವೈರಲ್ ಮಾಡಲಾಗಿತ್ತು. ಈ ಮದ್ಯೆ ಸ್ವತಃ ರವಿ ಡಿ ಚನ್ನಣ್ಣನವರ್ ಅವರೇ ಪ್ರತಿಕ್ರಿಯೆ ನೀಡಿ “ನನ್ನ ಮೇಲಿನ ಎಲ್ಲ ಆರೋಪಗಳು ಸುಳ್ಳು. ನನ್ನ ಎಲ್ಲ ಆಸ್ತಿಯನ್ನು ಕಾನೂನು ಬದ್ಧವಾಗಿ ಖರೀದಿಸಿದ್ದೇನೆ. ಈ ಎಲ್ಲದರ ಮಾಹಿತಿ ಆದಾಯ ತೆರಿಗೆ ಇಲಾಖೆಗೆ ನೀಡಲಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದರು.

ಇದೀಗ ರವಿ ಡಿ ಚನ್ನಣ್ಣವರ್ ಅವರ ಪೋಷಕರು ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ತಮ್ಮ ಹೆಸರಿನಲ್ಲಿರುವ ಆಸ್ತಿ ವಿವರದ ಬಗ್ಗೆ ಮಾಧ್ಯಮ ಪ್ರಕಟಣೆ ನೀಡಿರುವ ಅವರು, 25 ವರ್ಷಗಳಿಂದ ನಮ್ಮ ಕುಟುಂಬಕ್ಕೆ 6 ಎಕರೆ ಪಿತ್ರಾರ್ಜಿತ ಆಸ್ತಿ ಇತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಚನ್ನಣ್ಣನವರ್ ಪೋಷಕರ ಪತ್ರಿಕಾ ಪ್ರಕಟಣೆ ಇಂತಿದೆ:
ಈ ಮೂಲಕ ರತ್ನವ್ವ ಚನ್ನಣ್ಣನವರ್ ಮತ್ತು ದ್ಯಾಮಪ್ಪ ಚನ್ನಣ್ಣನವರ್ ರಾಧಾ ನಾವು ಈ ಮೂಲಕ ಮಾಧ್ಯಮ ಪ್ರಕಟಣೆಯನ್ನು ಹೊರಡಿಸುವುದು ಏನೆಂದರೆ, ಸುಮಾರು 25 ವರ್ಷಗಳಿಂದ ನಮ್ಮ ಕುಟುಂಬಕ್ಕೆ 6 ಎಕರೆ ಪಿತ್ರಾರ್ಜಿತ ಜಮೀನು ಇರುತ್ತದೆ. ಅಲ್ಲಿನ ಬೇಸಾಯದಿಂದ ಮತ್ತು ಬರದಿಂದಾಗಿ ಇಲ್ಲದಿರುವುದರಿಂದ ನಮ್ಮ ಕುಟುಂಬ ಕಡುಬಡತನದಿಂದ ಜೀವನ ಸಾಗಿಸುತ್ತಿದ್ದೇವೆ. ನಮ್ಮ ಹಿರಿಯ ಮಗ ರವಿ ಡಿ ಚೆನ್ನಣ್ಣನವರ್ ವಿದ್ಯಾಭ್ಯಾಸದಲ್ಲಿ ಮುಂದಿದ್ದು ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಪಾಸಾಗಿ ಐಪಿಎಸ್ ಆಗಿರುತ್ತಾರೆ.

ನಮ್ಮ ಕಿರಿಮಗ ರಾಘವೇಂದ್ರ ಚನ್ನಣ್ಣನವರ್ ಗುತ್ತಿಗೆದಾರ ಲೈಸನ್ಸ್ ಹೊಂದಿರುತ್ತಾನೆ. ಸಣ್ಣಪುಟ್ಟ ವ್ಯಾಪಾರ ಮಾಡುತ್ತಾರೆ. ನಾವೆಲ್ಲ ಬೇಸಾಯದಲ್ಲಿ ಮುಂದುವರೆದು ನಮ್ಮ ಕಿರಿಯ ಮಗನ ವ್ಯಾಪಾರ ಹಾಗೂ ಗುತ್ತಿಗೆ ಕೆಲಸದಿಂದ ಆದಾಯದ ಮೂಲಕ ಹೆಚ್ಚಿಸಿಕೊಂಡವು ಹಾಗೆ ನೀರಾವರಿ ಸೌಲಭ್ಯಗಳನ್ನು ಬಳಸಿಕೊಂಡು ನಮ್ಮ ಪಿತ್ರಾಜಿತ ಆರು ಎಕರೆಯಲ್ಲಿ ಜಮೀನಿನಲ್ಲಿ ಉತ್ತಮ ಬೆಳೆ ಪಡೆದು ಉತ್ತಮ ಆದಾಯ ಬಂದಿರುತ್ತದೆ. ಆದಾಯ ವೃದ್ಧಿಯಾದಂತೆ ಆದಾಯದ ಮೂಲದಿಂದ ನಮ್ಮ ಕಿರಿಯ ಮಗನ ಪರಿಶ್ರಮದಿಂದ ಆಸ್ತಿಗಳನ್ನು ಖರೀದಿ ಮಾಡಿರುತ್ತೇವೆ.

ಆ ಕಾಲಕ್ಕೆ ಅಂದರೆ ಹತ್ತು ಹನ್ನೆರಡು ವರ್ಷಗಳ ಹಿಂದೆ ಈ ಆಸ್ತಿಗಳನ್ನು ಖರೀದಿಸಲು ಗದಗ ಮುಳಗುಂದ ಸುರಪೂರ ವಿವಿಧ ಬ್ಯಾಂಕುಗಳಲ್ಲಿ ಸಾಲ ಇರುತ್ತದೆ. ನಮ್ಮ ಪಿತ್ರಾರ್ಜಿತ ಆಸ್ತಿಯನ್ನು ಹೊರತುಪಡಿಸಿ ನಾವು ಮತ್ತು ನಮ್ಮ ಕಿರಿಯಮಗ ಖರೀದಿಸಿದ್ದ ಜಮೀನು ನಮಗೆ ಬಂದ ಆದಾಯ ಹಾಗೂ ಸಾಲ ಪಡೆದ ವಿವರಗಳನ್ನು ಇಲಾಖೆಗೆ ಮಾಹಿತಿ ನೀಡಿರುತ್ತೇವೆ. ಮೊದಲಿನಿಂದಲೂ ವ್ಯಾಪಾರದಲ್ಲಿ ಆಸಕ್ತಿ ಹೊಂದಿದ್ದ ನಮ್ಮ ಕಿರಿಯ ಮಗ ರಾಘವೇಂದ್ರ ಚನ್ನಣ್ಣನವರ್ ಜಲ್ಲಿ ವ್ಯಾಪಾರ ಮಾಡಬೇಕೆಂದು ಬಯಸಿದ್ದು ನಮ್ಮ ಮನೆ ಗುರುಗಳು ಸೂಚಿಸಿದ ಮೇರೆಗೆ ನಮ್ಮ ಮನೆ ದೇವರ ಹೆಸರಿನಲ್ಲಿ ರೇಣುಕಾ ಎಂಟರ್ಪ್ರೈಸಸ್ ಹೆಸರಿನಲ್ಲಿ ಆಸಕ್ತರೊಂದಿಗೆ ಪಾಲುದಾರಿಕೆ ಪ್ರಾರಂಭಿಸಲು ಮಾನ್ಯ ಜಿಲ್ಲಾಧಿಕಾರಿಗಳ ಬಳಿ ಅನುಮತಿ ಕೋರಿದ್ದೇವೆ.

ಆದ್ದರಿಂದ ಎಲ್ಲಾ ಆಸ್ತಿಗಳು ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದಂತೆ ಅಕ್ರಮ ಆಸ್ತಿ ಆಗಿರುವುದಿಲ್ಲ. ಪರಿಶ್ರಮದಿಂದ ಸಂಪಾದಿಸಿದ ಆಸ್ತಿಗಳಾಗಿರುತ್ತವೆ ಎಂದು ಈ ಮೂಲಕ ವಿವರಣೆಯನ್ನು ನೀಡಬಯಸುತ್ತೇನೆ. ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿರುವ ಎಲ್ಲ ಆರೋಪಗಳು ಸುಳ್ಳು ಆಗಿರುತ್ತದೆ. ಅವಮಾನ ಮಾಡುತ್ತಿರುವುದರಿಂದ ಶಿಕ್ಷಾರ್ಹ ಅಪರಾಧವಾಗಿರುತ್ತದೆ ಮತ್ತು ಈ ಕುರಿತು ಕಾನೂನು ಕ್ರಮ ಕೈಗೊಳ್ಳುತ್ತಿದ್ದೇವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top