fbpx
ಸಮಾಚಾರ

ವಿಶಿಷ್ಟ ದಾಖಲೆ: ಅಣ್ಣಾವ್ರ ಕುಟುಂಬ ನಾಲ್ಕೂ ತಲೆಮಾರುಗಳೊಂದಿಗೆ ನಟಿಸಿದ್ದರು ಅಶ್ವಥ ನಾರಾಯಣ

ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದ ಕನ್ನಡದ ಹಿರಿಯ ನಟ ಟಿ.ಆರ್.ಅಶ್ವತ್ಥನಾರಾಯಣ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಟಿ.ಆರ್.ಅಶ್ವತ್ಥನಾರಾಯಣ ಭಾನುವಾರ (ಫೆಬ್ರವರಿ 6) ಬೆಳಗ್ಗೆ ಬೆಂಗಳೂರಿನ ಅವರ ನಿವಾಸದಲ್ಲೇ ವಿಧಿವಶರಾಗಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು.

ವಿಶಿಷ್ಟ ದಾಖಲೆ:
ಅಶ್ವತ್ಥ ನಾರಾಯಣ ಅವರು ವರನಟ ಡಾ.ರಾಜ್‌ ಕುಟುಂಬದ ನಾಲ್ಕು ತಲೆಮಾರುಗಳೊಂದಿಗೆ ನಟಿಸುವ ಮೂಲಕ ವಿಶಿಷ್ಟ ದಾಖಲೆ ಹೊಂದಿದ್ದಾರೆ. ಡಾ.ರಾಜ್‌ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರೊಂದಿಗೆ ನಾಟಕಗಳಲ್ಲಿ ಅಶ್ವತ್ಥ ನಾರಾಯಣ ಅವರು ಬಾಲನಟನಾಗಿ ಅಭಿನಯಿಸಿದ್ದರು. ಮುಂದೆ ಡಾ.ರಾಜ್‌ ಅಭಿನಯದ ಹಲವಾರು ಚಿತ್ರಗಳಲ್ಲಿ ನಟಿಸಿದ್ದು ರಾಜ್‌ ರ ಮೂವರು ಪುತ್ರರ ಸಿನಿಮಾಗಳಲ್ಲಿಯೂ ಪಾತ್ರಗಳನ್ನ ಮಾಡಿದ್ದಾರೆ. ಪುಟ್ಟಸ್ವಾಮಯ್ಯನವರ ನಾಲ್ಕನೇ ತಲೆಮಾರು, ಅಂದರೆ ರಾಘವೇಂದ್ರ ರಾಜಕುಮಾರ್‌ ಅವರ ಪುತ್ರ ವಿನಯ್‌ ರಾಜ್‌ ಕುಮಾರ್ ಅಭಿನಯದ ‘ಸಿದ್ದಾರ್ಥ’ ಚಿತ್ರದಲ್ಲಿ ಅವರು ನಟಿಸಿದ್ದರು. ಈ ಮೂಲಕ ಅಪರೂಪದ ದಾಖಲೆ ಬರೆದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top