ರಾಜ್ಯಾದ್ಯಂತ ವ್ಯಾಪಕವಾಗಿ ಸದ್ದು ಮಾಡುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಕ್ಕೆ ಹೊಸ ರೂಪ ಪಡೆದುಕೊಂಡಿದೆ. ಮುಸ್ಲಿಂ ಯುವತಿಯರ ಪರವಾಗಿ ದಲಿತ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ತರಗತಿಗಳಿಗೆ ಆಗಮಿಸಿದ್ದಾರೆ.
KA Ambedkarites who live by our Constitution are now out in protest for educational rights
Blue shawl does not symbolise one religion or another— instead, it stands for human rights & ongoing struggle for equity, dismantling communal Hindu-Muslim binary agendas of BJP & Congress pic.twitter.com/b9q9E265G4
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) February 7, 2022
ಮುಸ್ಲಿಂ ವಿದ್ಯಾರ್ಥಿನಿಯರು ಮೊದಲಿನಿಂದಲೂ ಧರಿಸಿ ಬರುತ್ತಿರುವ ಹಿಜಾಬ್ಗೆ ವಿರೋಧ ಮಾಡಬಾರದು ಎಂದು ‘ನೀಲಿ ಶಾಲು’ ಧರಿಸುವ ಮೂಲಕ ದಲಿತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ನೀಲಿ ಶಾಲು ಧರಿಸಿ ಕಾಲೇಜಿನ ಆವರಣಗಳಲ್ಲಿ ಮೆರವಣಿಗೆ ನಡೆಸಿದ್ದಾರೆ.
‘ಜೈ ಭೀಮ್’ ‘ಜೈ ಅಂಬೇಡ್ಕರ್’ ಘೋಷಣೆಗಳನ್ನ ಕೂಗುತ್ತಾ ದಲಿತ ಸಂಘಟನೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರೆ, ಇದಕ್ಕೆ ಪ್ರತಿಯಾಗಿ ಕೇಸರಿ ಶಾಲು ಧರಿಸಿರುವ ವಿದ್ಯಾರ್ಥಿಗಳಿಂದ ‘ಜೈ ಶ್ರೀರಾಮ್’ ಘೋಷಣೆ ಮೊಳಗಿತು. ಇದರಿಂದ ಕಾಲೇಜಿನಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
