fbpx
ಸಮಾಚಾರ

ಕನ್ನಡ ಹಾಡು ಹಾಕಿ ಎಂದದ್ದಕ್ಕೆ ಅಣ್ಣ -ತಂಗಿ ಮೇಲೆ ಹಲ್ಲೆ: ಕೊನೆಗೂ ಕ್ಷಮೆಯಾಚಿಸಿದ ಡಿಜೆ ಸಿದ್ದಾರ್ಥ

ಕೋರಮಂಗಲದ ಬದ್ಮಾಶ್ ಹ್ಯಾಂಗೋವರ್ ಪಬ್ನಲ್ಲಿ ನಡೆದ ಘಟನೆ ಸಂಬಂಧ ಸದ್ಯ ಡಿಜೆ ಸಿದ್ದಾರ್ಥ್ ಘಟನೆಗೆ ಕ್ಷಮೆಯಾಚಿಸಿದ್ದಾರೆ. ‘ಕನ್ನಡ ಹಾಡು ಹಾಕಿ’ ಎಂದು ಕೇಳಿದ ಯುವತಿ ಹಾಗೂ ಆಕೆಯ ಸಹೋದರ, ಸ್ನೇಹಿತರ ಮೇಲೆ ಹಲ್ಲೆಗೆ ಯತ್ನಿಸಿದ ಕೋರಮಂಗಲದ ಪಬ್‌ ಡಿಜೆ ಸಿದ್ದಾರ್ಥ್‌ ಮಲ್ಹೋತ್ರಾ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಸದ್ಯ ತಾನು ಮಾಡಿದ್ದು ತಪ್ಪು ಎಂದು ಡಿಜೆ ಸಿದ್ದಾರ್ಥ್ ಕ್ಷಮೆ ಕೇಳಿದ್ದಾರೆ.

 

 

ಈ ಬಗ್ಗೆ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದಾರ್ಥ್ ನಾನು ಪುನೀತ್ ರಾಜ್ ಕುಮಾರ್ ಅಭಿಮಾನಿ. ಪ್ರತಿ ದಿನ ಗೊಂಬೆ ಹೇಳುತೈತೆ ಹಾಡು ಪ್ಲೇ ಮಾಡ್ತಾ ಇದ್ದೆ. ಆದರೆ ಕಾರಣಾಂತರಗಳಿಂದ ಶನಿವಾರ ರಾತ್ರಿ ಕನ್ನಡ ಹಾಡು ಪ್ಲೇ ಮಾಡೋದಕ್ಕೆ ಸಾಧ್ಯವಾಗಲಿಲ್ಲ. ಅದಕ್ಕೆ ನಾನು ಕ್ಷೇಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.

ಸಿದ್ದಾರ್ಥ್ ಅವರ ಫೇಸ್ಬುಕ್ ಪೋಸ್ಟ್ ಈ ರೀತಿ ಇದೆ:
ನನ್ನ ಹೆಸರು ಸಿದ್ಧಾರ್ಥ ನಾನು 5ವರ್ಷದಿಂದ ಸಂಗೀತ ಕ್ಷೇತ್ರದಲ್ಲಿದ್ದೇನೆ ಡಿಜೆಯನ್ನು ನಡೆಸುತ್ತಿದ್ದೇನೆ ನಾನು ಹುಟ್ಟಿ ಬೆಳೆದಿದ್ದು ಹಾಗೂ ಶಾಲೆಯನ್ನು ಕಲಿತಿದ್ದು ಎಲ್ಲ ಬೆಂಗಳೂರಿನಲ್ಲೇ ನಾನು ಕನ್ನಡಿಗನೆ ಆಗಿದ್ದಾನೆ ನಾನು ನನ್ನ ಎಲ್ಲ ಪಾರ್ಟಿಗಳಲ್ಲಿ ಅಪ್ಪು ಸರ್ ಅವರ ಕನ್ನಡ ಹಾಡುಗಳನ್ನು ನುಡಿಸಿದ್ದೇನೆ (ಬೊಂಬೆ ಹೇಳುತೈತೆ )..

ನೆನ್ನೆ ದಿನ ರಾತ್ರಿ ಕೂಡ ನಾನು ಕನ್ನಡ ಹಾಡನ್ನು ಹಾಕಬೇಕಿತ್ತು ಆದರೆ ಪಬ್ ಮ್ಯಾನೇಜ್ ಮೆಂಟ್ ನವರು 1 ಗಂಟೆಯ ಒಳಗೆ ಪಬ್ ಅನ್ನು ಮುಚ್ಚಬೇಕು ಬೇಗ ಮುಗಿಸಿ ಎಂದು ಹೇಳಿದರು ಸಮಯದ ಅಭಾವ ಆಯಿತು ಆದ್ದರಿಂದ 12.30am ಗೆ ಕಾರ್ಯಕ್ರಮವನ್ನು ಮುಗಿಸಲಾಯಿತು ಆದ್ದರಿಂದ ಕನ್ನಡ ಹಾಡನ್ನು ಹಾಕಲು ಆಗಲಿಲ್ಲ ಆದ್ದರಿಂದ ನಾನು ದಯವಿಟ್ಟು ಕ್ಷಮೆಯನ್ನು ಕೇಳುತ್ತೇನೆ ..

ಹಾಗೂ ನಾನು ಎಲ್ಲಾ ಮಾಧ್ಯಮದವರನ್ನು ಹಾಗೂ ಕನ್ನಡಪರ ಸಂಘಟನೆಗಳನ್ನು ಗೌರವದಿಂದ ಕಾಣುತ್ತೇನೆ ಹಾಗೂ ನೆನ್ನೆ ನಡೆದ ಘಟನೆಯ ಬಗ್ಗೆ ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ ನಾನು ಎಲ್ಲಾ ಮಹಿಳೆಯರನ್ನು ಗೌರವದಿಂದ ಕಾಣುತ್ತೆನೆ ತಪ್ಪಾಗಿದೆ ನನ್ನನ್ನು ಕ್ಷಮಿಸಿ. ಎಲ್ಲರಲ್ಲೂ ಕ್ಷಮೆ ಕೇಳುತ್ತಿದ್ದೆನೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top