fbpx
ಸಮಾಚಾರ

ನಾಳೆ ನಮ್ಮ ಮಕ್ಕಳು ಹಸಿರು ಹಾಕಿ ಬರ್ತಾರೆ

ರಾಜ್ಯಾದ್ಯಂತ ವ್ಯಾಪಕವಾಗಿ ಸದ್ದು ಮಾಡುತ್ತಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಇಂದು ಹೊಸ ರೂಪ ಪಡೆದುಕೊಂಡಿತ್ತು. ಮುಸ್ಲಿಂ ಯುವತಿಯರ ಪರವಾಗಿ ಇಂದು ದಲಿತರು ಕೂಡ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ತರಗತಿಗಳಿಗೆ ಆಗಮಿಸಿದ್ದಾರೆ.

ಹಿಜಾಬ್, ಕೇಸರಿ ಶಾಲು ನಡುವೆ ನೀಲಿ ಶಾಲು ರಾಜ್ಯದಲ್ಲಿ ಸಂಚಲನ ಸೃಷ್ಟಿಸುತ್ತಿದ್ದು ಈ ಮದ್ಯೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಬೊಮ್ಮನಾಯಕನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ “ಹಿಜಾಬ್ ಕೇಸರಿ ಶಾಲು ವಿವಾದಕ್ಕೆ ಹೊಸದಾಗಿ ದೊಡ್ಡಮಟ್ಟಿನ ಪ್ರಚಾರ ನಡೆಯುತ್ತಿದೆ. ಎರಡು‌ ರಾಷ್ಟ್ರೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಕರಾವಳಿ ಪ್ರದೇಶದಲ್ಲಿ ಶಾಂತಿ ಸುವ್ಯಸ್ಥೆಗೆ ಭಂಗ ತರಲಾಗುತ್ತಿದೆ. ಕೇಸರಿ, ನೀಲಿ ಬಣ್ಣಗಳ ಶಾಲು ಹಾಕಿಕೊಂಡು ಬಂದರೆ ನಾಳೆ ನಮ್ಮ ಮಕ್ಕಳು ಹಸಿರು ಶಾಲು ಹಾಕಿಕೊಂಡು ಬರುತ್ತಾರೆ” ಎಂದರು

“ನಮ್ಮ ರೈತರ ಮಕ್ಕಳು ಹಸಿರು ಶಾಲು ಹಾಕಿಕೊಂಡು ಬರುತ್ತಾರೆ. ಹೀಗೆ ಶಾಲೆಗಳಲ್ಲಿ ವಾತಾವರಣ ಹಾಳಾಗುತ್ತದೆ. ಇವನ್ನೆಲ್ಲಾ ಇಷ್ಟಕ್ಕೆ ಅಂತ್ಯಗೊಳಿಸಬೇಕು” ಎಂದು ಕುಮಾರಸ್ವಾಮಿ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top