fbpx
ಸಮಾಚಾರ

ಬೀದರ್‌ಗೂ ಲತಾ ಮಂಗೇಶ್ಕ‌ರ್‌ಗೂ ಇದೆ ವಿಶೇಷ ನಂಟು

ಬಹು ಅಂಗಾಗದ ವೈಫಲ್ಯದಿಂದ ನಮ್ಮನ್ನು ಅಗಲಿದ ಭಾರತದ “ಗಾನ ಕೋಗಿಲೆ” ಎಂದೇ ಪ್ರಖ್ಯಾತರಾಗಿರುವ ಲತಾ ಮಂಗೇಶ್ಕರ್ ಅವರ ನಿಧನದಿಂದ ಸಂಗೀತ ಕ್ಷೇತ್ರ ಶೋಕ ಸಾಗರದಲ್ಲಿ ಮುಳುಗಿದೆ. ಲತಾ ದೀದಿ ಅವರ ಅಗಲಿಕೆಗೆ ಇಡೀ ಜಗತ್ತಿನ ಸಂಗೀತ ಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ಲತಾ ಅವರಿಗೂ ಮತ್ತು ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಮಾಣಿಕನಗರ ಗ್ರಾಮದ ಮಾಣಿಕಪ್ರಭು ಸಂಸ್ಥಾನಕ್ಕೂ ಸುಮಾರು ೭ ದಶಕದ ನಂಟಿದೆ ಎಂಬುದು ಬಹಳ ವಿಶೇಷವಾದ ಸಂಗತಿಯಾಗಿದೆ.

ಸಂಸ್ಥಾನದ ೫ ನೆೇ ಪೀಠಾಧಿಪತಿಗಳಾದ ಸಿದ್ಧರಾಜ ಪ್ರಭುಗಳು ಲತಾ ಮಂಗೇಶ್ಕರ್ ಅವರ ತಂದೆಯ ಅಧ್ಯಾತ್ಮ ಗುರುಗಳಾಗಿದ್ದರು. ಹೀಗಾಗಿ ೧೯೬೧ ರ ಡಿಸೆಂಬರ್ ೧೦ ರಂದು ಬೀದರ್ ಜಿಲ್ಲೆಯ ಹಲಸೂರು ತಾಲೂಕಿನ ಶಾಹಾಜಾನಿ ಔರಾದ್ ನಲ್ಲಿ ಲತಾ ಮಂಗೇಶ್ಕರ್ ಅವರು ತಮ್ಮ ತಂದೆ ದೀನನಾಥ್ ಮಂಗೇಶ್ಕರ್ ಅವರ ಹೆಸರಿನಲ್ಲಿ ಒಂದು ಕಾಲೇಜನ್ನು ಸ್ಥಾಪಿಸಿದರು.

೧೯೬೧ ರಲ್ಲಿ ಲತಾರ ಮುಂಬೈನ ನಿವಾಸದ ಹೆಸರು ಮಾಣಿಕಪ್ರಭುಗಳ ಹೆಸರಿನಿಂದ ಪ್ರಭುಕುಂಜ ಎಂದು ಬರೆಸಲಾಗಿತ್ತು ಎಂದು ಸಂಸ್ಥಾನದ ಕಾರ್ಯದರ್ಶಿಗಳಾದ ಆನಂದರಾಜ್ ಮಹಾರಾಜ್ ಅವರು ತಿಳಿಸಿದರು. ಅದಲ್ಲದೆ ೫ ನೆೇ ಪೀಠಾಧಿಕಾರಿಗಳ ಪಾದ ಪೂಜೆಯ ಕಾರ್ಯಕ್ರಮವು ಸಹ ಬಹಳ ಅದ್ದೂರಿಯಾಗಿ ನಡೆಯಿತು ಎಂದು ಅವರು ಆ ಮಧುರವಾದ ಘಟನೆಯನ್ನು ಸ್ಮರಿಸಿದರು.

ಈ ಸುಂದರವಾದ ಕಾರ್ಯಕ್ರಮದಲ್ಲಿ ಲತಾ ಮಂಗೇಶ್ಕರ್, ಆಶಾ ಮಂಗೇಶ್ಕರ್ ಮತ್ತು ಉಷಾ ಮಂಗೇಶ್ಕರ್ ೩ ಜನ ಸೇರಿಕೊಂಡು ಘನಾಶಮಾ ಸುಂದರ ಶ್ರೀಧರ ಮತ್ತು ಅರುಣೋದಯ ಝಾಲಾ ಎಂಬ ಹಾಡುಗಳನ್ನು ಹಾಡಿದರು ಎಂದು ಅವರು ಸ್ಮರಿಸಿಕೊಂಡರು. ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಲತಾ ಮಂಗೇಶ್ಕರ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top