fbpx
ಸಮಾಚಾರ

ಲತಾ ಮಂಗೇಶ್ಕರ್ ಕೊನೆವರೆಗೂ ಏಕೆ ಮದುವೆಯೇ ಆಗಲಿಲ್ಲ? ಮದುವೆ ಬಗ್ಗೆ ಅವರು ಏನು ಹೇಳಿದ್ದರು ಗೊತ್ತಾ?

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ವಯೋಸಹಜ ಕಾಯಿಲೆಯಿಂದಾಗಿ ನೆನ್ನೆ ನಿಧನ ಹೊಂದಿದರು. 92 ವರ್ಷದ ಲತಾ ಮಂಗೇಶ್ಕರ್ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಕೊಳ್ಳುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೇ ಇಂದು ವಿಧಿವಶರಾಗಿದ್ದಾರೆ. ಸಂಗೀತ ಲೋಕದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ ಲತಾ ದೀದಿ ಅಮರರಾಗಿದ್ದಾರೆ.

ಲತಾ ಅವರು ತಮ್ಮ ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ಸು ಗಳಿಸಿ ಜಗತ್ತಿನಾದ್ಯಂತ ತಮ್ಮದೇ ಅಭಿಮಾನಿ ಬಳಗವನ್ನ ಸಂಪಾದಿಸಿಕೊಂಡಿದ್ದಾರೆ. ಆದರೆ ಅವರು ಜೀವನಪರ್ಯಂತ ಮದುವೆಯೇ ಆಗದೆ ಉಳಿದುಕೊಂಡಿದ್ದರು. ಅವರು ಯಾಕೆ ಮದುವೆಯಾಗಲಿಲ್ಲ ಎಂಬ ಪ್ರಶ್ನೆಗಳಲ್ಲಿ ಈಗಲೂ ಕಾಡುತ್ತಿದೆ. ಈ ಬಗ್ಗೆ ಒಮ್ಮೆ ಸ್ವತಃ ಲತಾ ಮಂಗೇಶ್ಕರ್ ಅವರೇ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ್ದರು. “‘ಜೀವನದಲ್ಲಿ ಎಲ್ಲವೂ ದೇವರ ನಿರ್ಧಾರದ ಮೇಲೆ ನಿಂತಿದೆ. ಏನೇ ಆಗಲಿ ಅದು ನಮ್ಮ ಒಳಿತಿಗಾಗಿಯೇ ಆಗುತ್ತದೆ” ಎಂದು ಹೇಳಿಕೊಂಡಿದ್ದರು.

“ಮದುವೆಯಾಗಲು ಯಾವ ಹುಡುಗಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ? ಬಹುಶಃ ಈ ಪ್ರಶ್ನೆಯನ್ನು ನಲವತ್ತು ವರ್ಷಗಳ ಹಿಂದೆ ನನ್ನನ್ನ ಕೇಳಿದ್ದರೆ ನನ್ನ ಉತ್ತರವೇ ಬೇರೆಯೇ ಇರುತ್ತಿತ್ತೇನೋ. ಈ ವಯಸ್ಸಿನಲ್ಲಿ ಅಂತಹ ಯೋಚನೆ ಮಾಡಬಾರದು” ಎಂದು ಅವರು ಉತ್ತರಿಸಿದ್ದರು. ಅಂದಹಾಗೆ ಈ ಸಂದರ್ಶನದ ಸಮಯದಲ್ಲಿ ಲತಾ ಮಂಗೇಶ್ಕರ್ ಅವರಿಗೆ ಅದಾಗಲೇ 82 ವರ್ಷ ವಯಸ್ಸಾಗಿತ್ತು.

“ನನ್ನ ತಂದೆ ನಿಧನ ಹೊಂದಿದಾಗ ನನಗೆ ಕೇವಲ 13 ವರ್ಷ ವಯಸ್ಸು, ಕುಟುಂಬದ ಹಿರಿಯ ಮಗಳಾಗಿ ನಾನು ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಯಿತು.. ಒಂದು ಹಂತದಲ್ಲಿ ಮದುವೆಯಾಗುವ ಯೋಚನೆ ಬಂದಿದ್ದರೂ, ನಾನಾ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ” ಎಂದು ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಲತಾ ಹೇಳಿಕೊಂಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top