fbpx
ಸಮಾಚಾರ

ಲತಾ ಮಂಗೇಶ್ಕರ್ ರಾಜಮನೆತನದ ಓರ್ವನನ್ನ ಮದುವೆಯಾಗಲು ಒಪ್ಪಿದ್ದರಂತೆ: ಲತಾರ ಅದ್ಭುತ ಪ್ರೇಮಕತೆ

ಭಾರತದ “ಗಾನ ಕೋಗಿಲೆ” ಎಂದೇ ಪ್ರಖ್ಯಾತರಾಗಿರುವ ಲತಾ ಮಂಗೇಶ್ಕರ್ ಅವರು ಬಹಳ ಸರಳತೆಯಿಂದ ಕೂಡಿದ ವ್ಯಕ್ತಿ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಲತಾ ಮಂಗೇಶ್ಕರ್ ಅವರಿಗೆ ಯಾಕೆ ಮದುವೆಯಾಗಲಿಲ್ಲ ಎಂದು ಹಲವಾರು ಜನರ ಮನಸ್ಸಿನಲ್ಲಿ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಲತಾ ಮಂಗೇಶ್ಕರ್ ಅವರಿಗೆ ರಾಜಸ್ಥಾನದ ದುಂಗರ್ಪುರ್ ಖಾಂದಾನ್ ನ ರಾಜನಾದ ರಾಜ್ ಸಿಂಗ್ ದುಂಗರ್ಪುರ್ ಅವರೊಂದಿಗೆ ಪ್ರೀತಿಯಾಗಿತ್ತು. ಆದರೆ ಲತಾ ಮಂಗೇಶ್ಕರ್ ಅವರ ಸರಳತೆ ಮತ್ತು ಅವರು ಸಾಮಾನ್ಯ ಜನರಾಗಿದ್ದ ಕಾರಣ ಮದುವೆ ಆಗಲು ಸಾಧ್ಯವಾಗಲಿಲ್ಲ.

ಲತಾ ಮಂಗೇಶ್ಕರ್ ಅವರ ಸಹೋದರ ಹೃದಯನಾಥ್ ಮಂಗೇಶ್ಕರ್ ಮತ್ತು ರಾಜ ರಾಜ್ ಸಿಂಗ್ ದುಂಗರ್ಪುರ್ ಇಬ್ಬರು ಕ್ರಿಕೆಟ್ ಪ್ರೇಮಿಗಳಾಗಿದ್ದರು. ಇದರಿಂದ ಇವರಿಬ್ಬರ ಮಧ್ಯೆ ಒಳ್ಳೆಯ ಸ್ನೇಹ ಬೆಳೆಯಲು ಸಾಧ್ಯವಾಯಿತು.

ಲತಾ ಮಂಗೇಶ್ಕರ್ ಮತ್ತು ರಾಜ ರಾಜ್ ಸಿಂಗ್ ದುಂಗರ್ಪುರ್ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಸಹ ಕಾರಣಾಂತರದಿಂದ ಅವರಿಬ್ಬರೂ ವಿವಾಹ ಆಗಲು ಸಾಧ್ಯವಾಗಲಿಲ್ಲ. ರಾಜ್ ಸಿಂಗ್ ದುಂಗರ್ಪುರ್ ಅವರು ಲತಾ ಮಂಗೇಶ್ಕರ್ ಅವರನ್ನು ಪ್ರೀತಿಯಿಂದ “ಮೀಟು” ಎಂದು ಕರೆಯುತ್ತಿದ್ದರು.

ಆದರೆ ಇದಕ್ಕೆ ರಾಜ್ ಸಿಂಗ್ ಅವರ ಕುಟುಂಬದವರು ಒಪ್ಪಲಿಲ್ಲ. ರಾಜ ಮನೆತನಕ್ಕೆ ಸಾಮಾನ್ಯ ಮನೆತನದ ಸೊಸೆಯನ್ನು ತರಲು ಅವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ ಮತ್ತು ಇದಕ್ಕೆ ಅವರು ರಾಜ್ ಸಿಂಗ್ ದುಂಗರ್ಪುರ್ ಅವರಿಂದ ಕೂಡ ಪ್ರಮಾಣವನ್ನು ಮಾಡಿಸಿಕೊಂಡರು.

ರಾಜ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರು ಗುಪ್ತವಾಗಿ ಮದುವೆಯಾಗಿದ್ದಾರೆ ಎಂಬ ಗಾಳಿ ಸುದ್ದಿ ಎಲ್ಲಾ ಕಡೆ ಹರಿದಾಡುತಿತ್ತು. ಆದರೆ ಇದರ ಬಗ್ಗೆ ರಾಜ್ಯಶ್ರೀ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದು ” ರಾಜ್ ಸಿಂಗ್ ರವರ ಸಹದೋರ, ಸಹೋದರಿಯವರ ಮಕ್ಕಳು ರಾಜ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರ ಪ್ರೇಮಕ್ಕೆ ಸಾಕಷ್ಟು ಬೆಂಬಲ ನೀಡಿದರು. ಆದರೆ ರಾಜ್ ಸಿಂಗ್ ಪೋಷಕರಿಗೆ ಮಾತು ಕೊಟ್ಟಿದ್ದರಿಂದ ವಿವಾಹ ಸಾಧ್ಯವಾಗಲಿಲ್ಲ. ಅವರು ಗುಪ್ತವಾಗಿ ಮದುವೆ ಆಗಲಿಲ್ಲ” ಎಂದರು.

ಅಚ್ಚರಿಯ ವಿಷಯವೇನೆಂದರೆ ರಾಜ್ ಸಿಂಗ್ ಮತ್ತು ಲತಾ ಮಂಗೇಶ್ಕರ್ ಅವರು ತಮ್ಮ ಜೀವನದ ಕೊನೆಯವರೆಗೂ ಯಾರನ್ನು ವಿವಾಹವಾಗದೇ ಒಂಟಿಯಾಗಿಯೇ ಇದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top