fbpx
ಸಮಾಚಾರ

“ಮೈ ತುಂಬಾ ಬಟ್ಟೆ ಹಾಕಿ” ಎಂದ ನೆಟ್ಟಿಗನಿಗೆ ನಿವೇದಿತಾ ಕೊಟ್ಟ ಉತ್ತರ ಏನು?

ಕನ್ನಡ ಬಿಗ್ ಬಾಸ್ ಸೀಸನ್ ಐದರ ಪ್ರಮುಖ ಆಕರ್ಷಣೆಯಾಗಿ ಮನೆ ಮಾತಮಾತಾಗಿದ್ದ ಮೈಸೂರಿನ ಬೆಡಗಿ ನಿವೇದಿತಾ ಗೌಡ ಎಲ್ಲರಿಗೂ ಗೊತ್ತಿರೋಹಾಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್.. ಅಸಲಿಗೆ ಡಬ್ ಸ್ಮಾಷ್ ಗಳ ಮೂಲಕ ವೈರಲ್ ಆಗಿಯೇ ಆಕೆ ಬಿಗ್ ಬಾಸ್ ವೇದಿಕೆಗೆ ಆಯ್ಕೆಯಾಗಿದ್ದು.. ಬಿಗ್ ಬಾಸ್ ನಲ್ಲೆ ಸಹ ಸ್ಪರ್ದಿಯಾಗಿದ್ದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿದ್ದ ನಿವೇದಿತಾ ಇತ್ತೀಚಿಗೆ ಟಿವಿ ಶೋಗಳಿಂದ ದೂರ ಉಳಿದು ಸಂಸಾರ ತಾಪತ್ರಯಗಳಲ್ಲಿ ಮುಳುಗಿಹೋಗಿದ್ದಾರೆ. ಈ ಮದ್ಯೆ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೊಗಳನ್ನ ಹಂಚಿಕೊಳ್ಳೋ ಮೂಲಕ ಅಭಿಮಾನಿಗಳ ಜೊತೆ ಟಚ್ಚಲಿದ್ದಾರೆ ನಿವೇದಿತಾ.

ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈ ಚೆಲುವೆ ಇದೇ ಮೊದಲ ಬಾರಿ ವಿಡಿಯೋ ಮಾಡುವ ಮೂಲಕ ಕೆಟ್ಟ ಕಾಮೆಂಟ್ ಮಾಡುವವರಿಗ ಉತ್ತರ ನೀಡಿದ್ದಾರೆ. ನೀವು ಮೈ ಕಾಣುವ ಹಾಗೆ ತುಂಡು ಬಟ್ಟೆಗಳನ್ನು ತೊಡಬೇಡಿ, ಚೂಡಿದಾರ್ ಅಥವಾ ಸೀರೆ ತೊಟ್ಟು ವಿಡಿಯೋ ಮಾಡಿ ಎಂದು ಕಾಮೆಂಟ್ ಮಾಡಿದ್ದ ನೆಟ್ಟಿಗನಿಗೆ ನಿವೇದಿತಾ ತಿರುಗೇಟು ನೀಡಿದ್ದಾರೆ.

ನೀವು ಅರ್ಧಬರ್ಧಂ ಬಟ್ಟೆ ಹಾಕುವ ಬದಲು ಮೈತುಂಬಾ ಬಟ್ಟೆ ಹಾಕುವುದನ್ನು ಕಲಿ ಎಂದು ಕಾಮೆಂಟ್​ ಮಾಡಿದ ನೆಟ್ಟಿಗನನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ನಿವೇದಿತಾ,  “ನನ್ನ ಬಟ್ಟೆ, ನನ್ನ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಹೇಗೆ ಮಾತನಾಡುತ್ತೀರಿ, ನೋಡುವ ದೃಷ್ಟಿ ಸರಿಯಿದ್ದರೆ ಎಲ್ಲವೂ ಸರಿ ಇರುತ್ತೆ. ಹಾಗಾಗಿ ನನಗೆ ಇಷ್ಟ ಬಂದ ಬಟ್ಟೆಯನ್ನು ನಾನು ಹಾಕುತ್ತೇನೆ. ನಾನೇನಾದರೂ ಬಂದು ನಿಮ್ಮನ್ನು ಈ ಬಟ್ಟೆ ಯಾಕೆ ಹಾಕಿಕೊಂಡಿದ್ದೀರಾ ಅಂತಾ ಕೇಳಿದನಾ?” ಎಂದು ನಿವೇದಿತಾ ಉತ್ತರ ನೀಡಿದ್ದಾರೆ.  ನಮ್ಮ ವೈಯಕ್ತಿಕ ವಿಚಾರಗಳನ್ನು ಗೌರವಿಸಿ ಎಂದು ಪಾಠ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top