fbpx
ಸಮಾಚಾರ

ವರನಟ ಡಾ.ರಾಜ್‍ಕುಮಾರ್ ಪುತ್ಥಳಿಗೆ ಕನ್ನ ಹಾಕಿದ ಖದೀಮರು

ಬೆಂಗಳೂರು ನಗರದ ಲುಂಬಿನಿ ಉದ್ಯಾನದಲ್ಲಿದ್ದ ನಟ ರಾಜ್‌ಕುಮಾರ್ ಅವರ ಕಂಚಿನ ಪುತ್ಥಳಿ ಕಳ್ಳತನವಾಗಿದ್ದು, ಈ ಬಗ್ಗೆ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳರು 2 ದಿನಗಳ ಹಿಂದೆಯೇ ರಾಜ್‍ಕುಮಾರ್ ಕಂಚಿನ ಪ್ರತಿಮೆ ಕದ್ದುಕೊಂಡು ಹೋಗಿದ್ದರು. ಕೃತ್ಯದ ಬಗ್ಗೆ ಅರಣ್ಯಾಧಿಕಾರಿ ಯೋಗೇಶ್ ಎಂಬುವರಿಂದ ದೂರು ದಾಖಲಾಗಿದೆ. ಅದರಂತೆ ಜ.25ರಂದು ಅರಣ್ಯ ಇಲಾಖೆಯ ಹೆಣ್ಣೂರು ವಿಭಾಗದ ಡೆಪ್ಯೂಟಿ ರೇಂಜ್‌ ಫಾರೆಸ್ಟ್‌ ಆಫೀಸರ್‌ ಎಂ.ಎಸ್‌.ಯೋಗೇಶ್‌ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಿದ್ದ ಪೊಲೀಸರು ಇದೀಗ ಇಬ್ಬರು ಶಂಕಿತ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

‘ಪುತ್ಥಳಿ ಕಳ್ಳತನ ಬಗ್ಗೆ ಅರಣ್ಯ ಅಧಿಕಾರಿ ಯೋಗೇಶ್‌ ಎಂಬುವರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಳ್ಳತನ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top