ಲತಾ ಮಂಗೇಶ್ಕರ್ ನಿಧನದಿಂದ ಇಡೀ ಸಂಗೀತ ಕ್ಷೇತ್ರ ಕಣ್ಣೀರಿನ ಕಡಲಲ್ಲಿ ಮುಳುಗಿದೆ. ನಿನ್ನೆ ನಡೆದ ಲತಾ ಮಂಗೇಶ್ಕರ್ ಅಂತ್ಯಕ್ರಿಯೆ ಕೂಡ ನಡೆಯಿತು. ಲತಾ ಅವರ ಅಂತ್ಯಕ್ರಿಯೆಯಲ್ಲಿ ಸಿನಿಮಾರಂಗ, ರಾಜಕೀಯ, ಕ್ರಿಕೆಟ್ ರಂಗದ ಅನೇಕ ಗಣ್ಯರು ಭಾಗವಹಿಸಿದ್ದರು. ಬಾಲಿವುಡ್ ನಟ ಶಾರುಖ್ ಖಾನ್ ಕೂಡ ಭಾಗವಹಿಸಿದ್ದರು.
क्या इसने थूका है ❓ pic.twitter.com/RZOa2NVM5I
— Arun Yadav (@beingarun28) February 6, 2022
ಅಂತ್ಯಕ್ರಿಯೆಯ ವೇಳೆ ಶಾರುಖ್ ಖಾನ್ ಲತಾಜಿಯ ಮೃತದೇಹದ ಮೇಲೆ ಉಗಿದಿದ್ದಾರೆ ಎಂದು ಕೆಲವರು ಆರೋಪ ಮಾಡಿದ್ದು, ಇದಕ್ಕೆ ಸಾಕ್ಷಿಯಾಗಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ. ಶಾರುಖ್ ಅವರ ಈ ಕೃತ್ಯವನ್ನು ಅನೇಕರು ಬಲವಾಗಿ ಖಂಡಿಸುತ್ತಿದ್ದಾರೆ. ಆದರೆ, ಕೆಲವರು ಮಾತ್ರ ಇದು ಕೇವಲ blowing (ಗಾಳಿ ಊದುವುದು) ಎಂದು ಹೇಳುತ್ತಿದ್ದಾರೆ. ಅಸಲಿಗೆ, ಇಸ್ಲಾಂ ಧರ್ಮದಲ್ಲಿ ದುಷ್ಟಶಕ್ತಿಗಳನ್ನು ಅಥವಾ ‘ಸೈತಾನ’ನನ್ನು ದೂರವಿಡಲು ಹೀಗೆ ಮಾಡಲಾಗುತ್ತದೆ ಎಂಬುದು ಕೆಲವರ ವಾದ.
ಅಸಲಿ ವಿಚಾರ ಏನು ಗೊತ್ತಾ?
ಅಸಲಿಗೆ ಶಾರುಖ್ ಅವರು ಮೃತದೇಹದ ಮೇಲೆ ಉಗಿದಿದ್ದಾರೆ ಎಂಬ ವಿಷಯ ಶುದ್ಧ ಸುಳ್ಳು. ಬದಲಿಗೆ ಬಾಯಿಂದ ಗಾಳಿ ಊದಿದರು. ಇಸ್ಲಾಂ ಧರ್ಮದಲ್ಲಿ ಇದೊಂದು ಪದ್ಧತಿ. ಸತ್ತವರು ದೇವರ ಆಶೀರ್ವಾದದಿಂದ ಮತ್ತೆ ಮಾನವರಾಗಿ ಜನಿಸಲಿ ಎಂದು ಪ್ರಾರ್ಥಿಸುವ ಪದ್ಧತಿ… ಒಳ್ಳೆಯ ಉದ್ದೇಶದಿಂದ ಶಾರುಖ್ ಖಾನ್ ಮಾಡಿದ ಕಾರ್ಯವನ್ನು ತಪ್ಪಾಗಿ ಗ್ರಹಿಸಿ ಕಿಡಿಗೇಡಿಗಳು ಶಾರುಖ್ ರ ಮೇಲೆ ವಿಷ ಕಾರುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
