fbpx
ಸಮಾಚಾರ

ಮಾಜಿ ಕ್ರಿಕೆಟಿಗ ಸುರೇಶ್ ರೈನಾ ತಂದೆ ನಿಧನ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ತಂದೆ ತ್ರಿಲೋಕಚಂದ್ರ ರೈನಾ ಭಾನುವಾರ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಗಾಜಿಯಾಬಾದ್ ನಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ತ್ರಿಲೋಕಚಂದ್​ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು ಮತ್ತು ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಬಾಂಬ್ ತಯಾರಿಸುವ ಪಾಂಡಿತ್ಯ ಹೊಂದಿದ್ದರು ಎನ್ನಲಾಗಿದೆ. ಹರ್ಭಜನ್ ಸಿಂಗ್ ಸೇರಿ ದಂತೆ ರೈನಾ ತಂಡದ ಆಟಗಾರರು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

ರೈನಾ ತಂದೆಯ ಪೂರ್ವಜರು ಮೂಲತಃ ಜಮ್ಮು ಕಾಶ್ಮೀರದ ಮೂಲದವರು. 1990ರ ಕಾಶ್ಮೀರಿ ಪಂಡಿತರ ಹತ್ಯೆಯ ನಂತರ ತಮ್ಮ ಗ್ರಾಮ ರೈನಾವಾರಿಯನ್ನು ತ್ಯಜಿಸಿ ಉತ್ತರ ಪ್ರದೇಶದ ಘಾಜಿಯಾಬಾದ್​ ಜಿಲ್ಲೆಯ ಮುರದಬಗರ್​ ಪಟ್ಟಣಕ್ಕೆ ವಲಸೆ ಬಂದಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top