fbpx
ಸಮಾಚಾರ

ಲತಾ ಮಂಗೇಶ್ಕರ್ ಬಿಟ್ಟುಹೋದ 358 ಕೋಟಿ ಅಸ್ತಿ ಯಾರಿಗೆ ಸೇರುತ್ತೆ ಎಂಬುದೇ ಚರ್ಚೆ

ಇತ್ತೀಚಿಗೆ ಬಹು ಅಂಗಾಗದ ವೈಫಲ್ಯದಿಂದ ನಮ್ಮನ್ನು ಅಗಲಿದ ಭಾರತದ “ಗಾನ ಕೋಗಿಲೆ” ಎಂದೇ ಪ್ರಖ್ಯಾತರಾಗಿರುವ ಲತಾ ಮಂಗೇಶ್ಕರ್ (92 ) ಅವರ ಆಸ್ತಿ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಅವರು ಸಂಪಾದಿಸಿದ ಅಷ್ಟೊಂದು ಆಸ್ತಿ ಈಗ ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎಲ್ಲರ ಮನಸಲ್ಲಿ ಮೂಡುವುದ ಸಹಜ. ಆದರೆ ಈ ಪ್ರೆಶ್ನಗೆ ಕೆಲವು ಮೂಲಗಳಿಂದೆ ಉತ್ತರ ದೊರಕಿದೆ.

ಇವರು ಸುಮಾರು ಏಳು ದಶಕಗಳ ಕಾಲ ಸಿನಿಮಾ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಅಪಾರವಾದದ್ದು. ಇದರಿಂದ ಅವರು ಗಳಿಸಿರುವ ಅಸ್ತಿ ಕೇವಲ ಒಂದು ಅಥವಾ ಎರಡು ಕೋಟಿಯಲ್ಲ, ಸುಮಾರು 368 ಕೋಟಿ. ಇಷ್ಟು ಅಪಾರವಾದ ಅಸ್ತಿ ಈಗ ಯಾರ ಪಾಲಾಗುತ್ತದೆ ಎಂಬುದೇ ಒಂದು ದೊಡ್ಡ ಪ್ರಶ್ನೆಯಾಗಿದೆ.

ಲತಾ ಮಂಗೇಶ್ಕರ್ ಅವರಿಗೆ ಕಾರುಗಳ ಮೇಲೆ ಬಹಳ ಕ್ರೇಜ್ ಇತ್ತು. ಅವರ ಬಳಿ ದುಬಾರಿಯಾದ ಕಾರುಗಳು ಸಹ ಇದ್ದವು. ಇದಲ್ಲದೆ ಅವರಿಗೆ ಚಿನ್ನದ ಆಭರಣಗಳೆಂದರೆ ಬಹಳ ಇಷ್ಟವಿತ್ತು. ಈಗ ಇಷ್ಟೊಂದು ಆಸ್ತಿಗಳಿಗೆ ವಾರಸುದಾರ ಇಲ್ಲದೇ ಇರುವ ಕಾರಣ ಇಷ್ಟೊಂದು ಆಸ್ತಿಯ ಒಡೆಯ ಯಾರಾಗುತ್ತಾರೆ ಎಂಬ ಕುತೂಹಲ ಜನರಲ್ಲಿ ಮೂಡುವುದು ಸಹಜ.

ನಮಗೆಲ್ಲರಿಗೂ ತಿಳಿದಿರುವಂತೆ ಲತಾ ಮಂಗೇಶ್ಕರ್ ಅವರಿಗೆ ಮದುವೆ ಯಾಗಿಲ್ಲ. ಆದರೆ ಲತಾ ಮಂಗೇಶ್ಕರ್ ಅವರಿಗೆ ಸೋದರ- ಸೋದರಿಯರಿರುವರು, ಮತ್ತು ಲತಾ ಮಂಗೇಶ್ಕರ್ ಅವರಿಗೆ ತಮ್ಮ ಸೋದರಿಯರ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಸಹ ಇತ್ತು. ಮೂಲಗಳ ಪ್ರಕಾರ ಇವರ ಆಸ್ತಿಕ ಕೆಲವು ಪಾಲು ಅವರ ಸೋದರ ಸೋದರಿಯರ ಮಕ್ಕಳಿಗೆ ಸೇರಬಹುದು ಎಂಬ ಚರ್ಚೆ ಆಗುತ್ತಿದೆ. ಇದಲ್ಲದೆ ಲತಾ ಮಂಗೇಶ್ಕರ್ ಅವರು ತಾವು ಬದುಕಿದ್ದಾಗಲೆ ಒಂದು ಚಾರಿಟೇಬಲ್ ಟ್ರಸ್ಟ್ ಒಂದನ್ನು ಸ್ಥಾಪಿಸಿದರು. ಆದ್ದರಿಂದ ಇವರ ಆಸ್ತಿಕ ಕೆಲವು ಪಾಲು ಈ ಚಾರಿಟೇಬಲ್ ಟ್ರಸ್ಟ್ ಗೆ ಸೇರಬಹುದು. ಈಗಾಗಲೇ ಲತಾ ಮಂಗೇಶ್ಕರ್ ಅವರ ವಕೀಲರು ಇದರ ಕುರಿತು ಕಾರ್ಯ ನಿರ್ವಹಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top