fbpx
ಸಮಾಚಾರ

ಅಂದು ಎಲ್ಲರೂ ಕೈಬಿಟ್ಟಾಗ ಟೀಮ್ ಇಂಡಿಯಾ ಕೈ ಹಿಡಿದಿದ್ದ ಲತಾ ಮಂಗೇಶ್ಕರ್

ಇಂದು ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಬೆಳೆದಿರುವ ಬಿಸಿಸಿಐನ ಕಷ್ಟದ ದಿನಗಳಲ್ಲಿ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರು ಅದರ ನೆರವಿಗೆ ಬಂದಿದ್ದರು. ಅವರ ನೆರವಿನಿಂದಾಗಿ ಅಂದು ಬಿಸಿಸಿಐ ಗೌರವ ಉಳಿದಿತ್ತು.

ಹೌದು, ಲತಾ ಮಂಗೇಶ್ಕರ್​ ಅವರು 1983ರ ವಿಶ್ವಕಪ್​ ಗೆದ್ದ ಕಪಿಲ್​ ದೇವ್​ ನೇತೃತ್ವದ ಭಾರತ ತಂಡವನ್ನು ಗೌರವಿಸುವುದಕ್ಕಾಗಿ ಆ ಕಾಲದಲ್ಲೇ ಸಂಗೀತ ಕಾರ್ಯಕ್ರಮದ ಮೂಲಕ ಬರೋಬ್ಬರಿ 20 ಲಕ್ಷರೂ ದೇಣಿಗೆ ಸಂಗ್ರಹಿಸಿ ಆಟಗಾರರಿಗೆ ನೀಡಿದ್ದರು. ಈ ವಿಚಾರವನ್ನು ಭಾರತದ ಮಾಜಿ ನಾಯಕ ಮನ್ಸೂರ್ಲ್​ ಅಲಿ ಖಾನ್ ಪಟೌಡಿ ಪತ್ನಿ ಹಾಗೂ ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೂರ್​ ಬಹಿರಂಗ ಪಡಿಸಿದ್ದಾರೆ.

 

 

ಭಾರತದ ಕ್ರಿಕೆಟ್ ತಂಡ 1983ರಲ್ಲಿ ಮೊದಲ ವರ್ಲ್ಡ್ ಕಪ್ ಗೆದ್ದಿತ್ತು. ಆದರೆ ಬಿಸಿಸಿಐ(BCCI) ಬಳಿ ತಮ್ಮ ತಂಡವನ್ನು ಗೌರವಿಸುವುದಕ್ಕೂ ಹಣವಿರಲಿಲ್ಲ, ಭಾವನಾತ್ಮಕವಾಗಿ ಭಾರತದ ಪಾಲಿಗೆ ಅತ್ಯಂತ ಸಂಭ್ರಮದ ಸಮಯವಾಗಿತ್ತದು. ಆ ಸಂದರ್ಭದಲ್ಲಿ ದೇಶದ ಕೀರ್ತಿ ಪತಾಕೆ ಹಾರಿಸಿದ ಕ್ರಿಕೆಟ್ ಕಲಿಗಳನ್ನು ಗೌರವಿಸಲು ಲತಾ ಮಂಗೇಶ್ಕರ್ ಫಂಡ್ ರೈಸ್‌ಗೆ ಟೊಂಕ ಕಟ್ಟಿ ನಿಂತರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಅವರು 20 ಲಕ್ಷ ಸಂಗ್ರಹಿಸಲು ಮುಂದೆ ನಿಂತರು.

ದೆಹಲಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ, ಅದರಿಂದ ಬರುವ ಹಣವನ್ನು ಟೀಮ್ ಇಂಡಿಯಾ ಆಟಗಾರರಿಗೆ ಗೌರವ ಧನ ನೀಡುವ ರಾಜ್ ಸಿಂಗ್ ಡುಂಗರ್ಪುರ್ ಯೋಜನೆಗೆ ಲತಾ ಮಂಗೇಶ್ಕರ್ ಸಮ್ಮತಿ ನೀಡಿದರು. ದೆಹಲಿಯ ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ಸಂಗೀತ ಕಾರ್ಯಕ್ರಮ ನಡೆಯಿತು. ಸಂಗೀತ ಕಾರ್ಯಕ್ರಮದಲ್ಲಿ 20 ಲಕ್ಷ ರೂಪಾಯಿ ಸಂಗ್ರಹವಾಯಿತು. ಪರಿಣಾಮ, ಟೀಮ್ ಇಂಡಿಯಾ ಆಟಗಾರರಿಗೆ ತಲಾ ಒಂದೊಂದು ಲಕ್ಷ ರೂಪಾಯಿಯನ್ನು ನೀಡಲಾಯಿತು. ಆದರೆ, ಲತಾ ಮಂಗೇಶ್ಕರ್ ಮಾತ್ರ ಈ ಕಾರ್ಯಕ್ರಮಕ್ಕಾಗಿ ಯಾವುದೇ ಸಂಭಾವನೆಯನ್ನು ಪಡೆದಿರಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top