fbpx
ಸಮಾಚಾರ

ಹಿಂದೂ ದೇವರಿಗೆ ಅವಹೇಳನ ಮಾಡಿದ ಆರೋಪ; ಬಿಗ್​ ಬಾಸ್​ ಕೊನೆಯ ಸೀಸನ್​ನ ಸ್ಪರ್ಧಿ ಅರೆಸ್ಟ್​

ಹಿಂದಿ ಧಾರ್ಮಿಕ ಭಾವನೆಗೆ ದಕ್ಕೆ ತಂದ ಆರೋಪದ ಮೇಲೆ ತೆಲುಗು ಬಿಗ್ ಬಾಸ್ ಕಾರ್ಯಕ್ರಮದ ಸ್ಪರ್ದಿಯಾಗಿದ್ದ ಯೂಟ್ಯೂಬರ್, ನಟಿ ಸರಯು ರಾಯ್ ಅನ್ನು ಹೈದರಾಬಾದ್‌ನ ಬಂಜಾರಾ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆ. ಸರಯು ರಾಯ್ ಮಾತ್ರವೇ ಅಲ್ಲದೆ ಆಕೆಯ ಕೆಲವು ಬೆಂಬಲಿಗರನ್ನೂ ಪೊಲೀಸರು ಬಂಧಿಸಿದ್ದಾರೆ.

ಸರಯು ರೆಸ್ಟೋರೆಂಟ್​ ಒಂದರ ಪ್ರಚಾರಕ್ಕೆ ವಿಡಿಯೋ ಒಂದನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋದಲ್ಲಿ ಸರಯೂ ಮತ್ತಿತರರು ತಲೆಯ ಮೇಲೆ ಗಣಪತಿ ಬಪ್ಪಾ ಮೋರೆಯಾ ಬ್ಯಾಂಡ್ ಧರಿಸಿದ್ದರು. ದೇವರ ಗೊಂಬೆಗಳನ್ನು ಧರಿಸಿ ಮದ್ಯ ಸೇವನೆ ಮಾಡಿದ್ದರು. ಇದು ವಿವಾದ ಹತ್ತಿಕೊಳ್ಳಲು ಪ್ರಮುಖ ಕಾರಣವಾಗಿತ್ತು. ಇದು ಹಿಂಡೋಗಳ ಭಾವನೆಗಳನ್ನ ಕೆರಳಿಸಿತ್ತು.

ಇದು ಹಿಂದೂ ಸಮುದಾಯಕ್ಕೆ ಅಪಮಾನ ಕಾರಿಯಾಗಿದೆ ಎಂದು ರಾಜಣ್ಣ ಸಿರಿಲಾ ಜಿಲ್ಲೆಯ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಅಧ್ಯಕ್ಷ ಅಶೋಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಸೆಕ್ಷನ್ 153ಎ ಮತ್ತು 295ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪೊಲೀಸರು ಸರಯೂ ಅವರನ್ನು ಒಂದೂವರೆ ಗಂಟೆಗೂ ಹೆಚ್ಚು ಕಾಲ ಪ್ರಶ್ನಿಸಿದ್ದಾರೆ ಮತ್ತು ಅವರ ವೀಡಿಯೊ ತಂಡದ ಸದಸ್ಯರಾದ ಶ್ರೀಕಾಂತರೆಡ್ಡಿ ಮತ್ತು ನಟರಾದ ಕಾರ್ತಿಕ್ ಮತ್ತು ಕೃಷ್ಣಮೋಹನ್ ಅವರನ್ನು ಬಂಧಿಸಿದ್ದಾರೆ. ಅವರನ್ನು ಬಂಜಾರ ಪೊಲೀಸ್ ಥಾನಾಗೆ ಸ್ಥಳಾಂತರಿಸಲಾಯಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top