fbpx
ಸಮಾಚಾರ

ಮಹಾಭಾರತ ಖ್ಯಾತಿಯ ಭೀಮ ಪಾತ್ರಧಾರಿ ಪ್ರವೀಣ್ ಕುಮಾರ್ ಸೋಬ್ತಿ ವಿಧಿವಶ

ಬಾಲಿವುಡ್‌ಗೆ ಮತ್ತೊಂದು ಆಘಾತಕಾರಿ ಸುದ್ದಿ ಲಭಿಸಿದೆ. ಹೌದು ಲತಾ ಮಂಗೇಶ್ಕರ್ ನಂತರ ಇದೀಗ ಮಹಾಭಾರತ ಕಿರುತೆರೆ ಧಾರಾವಾಹಿಯಲ್ಲಿ ಭೀಮನ ಪಾತ್ರ ನಿರ್ವಹಿಸಿದ್ದ ಪ್ರವೀಣ್ ಕುಮಾರ್ ಸೋಬ್ತಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅಶೋಕ ವಿಹಾರದ ನಿವಾಸದಲ್ಲಿ ನಟ ಕೊನೆಯುಸಿರೆಳೆದಿದ್ದಾರೆ. ‘ಅವರಿಗೆ ದೀರ್ಘಕಾಲದ ಎದೆಯ ಸೋಂಕಿನ ಸಮಸ್ಯೆ ಇತ್ತು.

 

 

ಅವರಿಗೆ 74 ವರ್ಷ ವಯಸ್ಸಾಗಿತ್ತು. ದೀರ್ಘಕಾಲದಿಂದ ಅನಾರೋಗ್ಯ ಮತ್ತು ಆರ್ಥಿಕ ಅಡಚಣೆಗಳಿಂದ ಹೋರಾಡುತ್ತಿದ್ದ ಅವರು ತಮ್ಮ ದೊಡ್ಡ ನಿಲುವಿಗೆ ಹೆಸರುವಾಸಿಯಾಗಿದ್ದರು. ಪಂಜಾಬ್ ಮೂಲದವರಾದ ಇವರು 6’6 ಎತ್ತರ ಮತ್ತು ಕ್ರೀಡಾಪಟು ಕೂಡಾ ಆಗಿದ್ದರು. ನಟನಾ ವೃತ್ತಿಗೆ ಕಾಲಿಡುವ ಮೊದಲು ಪ್ರವೀಣ್ ಹ್ಯಾಮರ್ ಮತ್ತು ಡಿಸ್ಕಸ್ ಥ್ರೋ ಅಥ್ಲೀಟ್ ಆಗಿದ್ದರು.

1988 ರಲ್ಲಿ ಬಿ.ಆರ್‌. ಚೋಪ್ರಾ ಅವರ ಮಹಾಭಾರತ ಟಿವಿ ಸರಣಿಯಲ್ಲಿ ಭೀಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ನಟನಾ ವೃತ್ತಿ ಆರಂಭಿಸಿದರು. ಕರಿಷ್ಮಾ ಕುದ್ರತ್ ಕಾ, ಯುಧ್, ಜಬರ್ದಸ್ತ್, ಸಿಂಘಸನ್, ಖುದ್ಗರ್ಜ್, ಲೋಹಾ, ಮೊಹಬ್ಬತ್ ಕೆ ದುಷ್ಮನ್, ಇಲಾಕಾ ಇದಷ್ಟೇ ಅಲ್ಲದೇ ಇನ್ನೂ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top