ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ವಿವಾದಕ್ಕೂ ಅವಿನಾಭಾವ ಸಂಭಂದ ಇದೆ ಎಂದರೆ ತಪ್ಪಾಗುವುದಿಲ್ಲ. ಏಕೆಂದರೆ ಬನ್ಸಾಲಿ ಅವರ ಪ್ರತಿ ಚಿತ್ರದಲ್ಲಿಯೂ ಒಂದಲ್ಲ ಒಂದು ವಿವಾದ ಅವರನ್ನು ಕಾಡುತ್ತದೆ.. ಅವರ ಹಿಂದಿನ ಚಿತ್ರಗಳಾದ ಬಾಜಿರಾವ್ ಮಸ್ತಾನಿ, ರಾಮ್ ಲೀಲಾ, ಪದ್ಮಾವತಿ ಮುಂತಾದ ಸಿನಿಮಾಗಳ ಬಿಡುಗಡೆ ವೇಳೆ ವಿಪಾರೀತ ವಿವಾದಗಳು ಹುಟ್ಟುಕೊಂಡಿತ್ತು. ಈಗ ಬನ್ಸಾಲಿ ಅವರ ಮುಂದಿನ ಚಿತ್ರ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾಗೂ ವಿವಾದದ ಕಾವು ಬಡಿದಿದೆ.
How racist is this?
How can a prominent celebrity promote this kind of scene. He speaks Hindi and still she says like that? #GangubaiKathiawadi #AliaBhatt #GangubaiKathiawadiTrailer pic.twitter.com/pHMg19L0pB— Basavaraj Dangi (@dbas_72) February 4, 2022
ಇತ್ತೀಚೆಗಷ್ಟೇ ಚಿತ್ರದ ಹೊಸ ಟ್ರೈಲರ್ ಬಿಡುಗಡೆಯಾಗಿತ್ತು. ಟ್ರೈಲರ್ನಲ್ಲಿ ನಾಯಕ ನಟಿ ಆಲಿಯಾ ಭಟ್ ಹಲ್ಲು ಕೀಳಿಸುತ್ತಿರುವ ದೃಶ್ಯವೊಂದಿದೆ. ಅದರಲ್ಲಿ ಈಶಾನ್ಯ ಭಾರತದ ಪಾತ್ರವನ್ನು ದಂತ ವೈದ್ಯರ ರೂಪದಲ್ಲಿ ತೋರಿಸಲಾಗಿದೆ. ಅವರು ಆಲಿಯಾಗೆ ಮತ್ತಷ್ಟು ಬಾಯಿ ತೆರೆಯಲು ಹೇಳುತ್ತಾರೆ. ಆಗ ಪ್ರತಿಕ್ರಿಯಿಸುವ ಆಲಿಯಾ, ‘ಬಾಯಿಯನ್ನು ಇನ್ನೆಷ್ಟು ಅಗಲಿಸಬೇಕು? ಸಂಪೂರ್ಣ ಚೀನಾವನ್ನು ನನ್ನ ಬಾಯಿಯಲ್ಲಿ ಹಾಕುತ್ತೀರೋ ಹೇಗೆ?’ ಎಂದು ಖಾರವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಇದು ಈಶಾನ್ಯ ಭಾರತೀಯರ ಕೋಪಕ್ಕೆ ಕಾರಣವಾಗಿದೆ.
ಈಶಾನ್ಯ ಭಾರತದ ವ್ಯಕ್ತಿಯನ್ನು ಚೀನಾದವರೆಂದು ಭಾರತದ ವಿವಿಧ ಪ್ರದೇಶಗಳಲ್ಲಿ ಹೀಯಾಳಿ ನಿಂದಿಸುತ್ತಾರೆ ಎಂಬ ವಿಚಾರ ಹಳೆಯದೇನಲ್ಲ. ಇದೀಗ ಗಂಗೂಬಾಯಿ ಕಾಠಿಯಾವಾಡಿ ಚಿತ್ರದಲ್ಲೂ ಉದ್ದೇಶಪೂರ್ವಕವಾಗಿ ಈ ದೃಶ್ಯ ಇಡಲಾಗಿದೆ ಎಂಬುದು ದೃಶ್ಯವನ್ನು ವಿರೋಧಿಸುತ್ತಿರುವವರ ಅಭಿಪ್ರಾಯ. ಈಶಾನ್ಯ ಭಾರತದವರೆಂಬ ತಾತ್ಸಾರ ಏಕೆ ಎಂಬುದು ಮತ್ತಷ್ಟು ಜನರ ಪ್ರಶ್ನೆ. ಇವುಗಳನ್ನು ಮುಂದಿಟ್ಟುಕೊಂಡು ಭನ್ಸಾಲಿಯವರನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
