fbpx
ಸಮಾಚಾರ

ಮೊದಲ ಮಗುವಿನ ನಿರೀಕ್ಷೆಯಲ್ಲಿ ‘ಕಾಮಿಡಿ ಕಿಲಾಡಿಗಳು’ : ಗೋವಿಂದೇ ಗೌಡ – ದಿವ್ಯಶ್ರೀ ಬೇಬಿ ಬಂಪ್ ಫೋಟೋ

ಜೀ ಕನ್ನಡ ವಾಹಿನಿಯ ‘ಕಾಮಿಡಿ ಕಿಲಾಡಿಗಳು’ ಷೋ ಮೂಲಕ ಖ್ಯಾತಿ ಗಳಿಸಿದ್ದ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ಇಬ್ಬರು ಪ್ರೀತಿಸಿ ಮಾಡುವೆ ಮಾಡಿಕೊಂಡಿದ್ದರು. ಇದೀಗ ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ದಂಪತಿ ಸಂತೋಷದಲ್ಲಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ನಟಿ ದಿವ್ಯಶ್ರೀ ಇದೀಗ ತುಂಬು ಗರ್ಭಿಣಿ. ದಿವ್ಯಶ್ರೀ ಇತ್ತೀಚೆಗಷ್ಟೇ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ಗೋವಿಂದೇ ಗೌಡ ಅವರು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಗೋವಿಂದೇ ಗೌಡ ಹಾಗೂ ದಿವ್ಯಶ್ರೀ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

 

 

ಅಂದಹಾಗೆ ಶೋನಲ್ಲಿಯೇ ಒಬ್ಬರನ್ನೊಬ್ಬರು ಇಷ್ಟ ಪಟ್ಟ ಈ ಜೋಡಿ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆ ಮಾಡಿಕೊಂಡಿದ್ದರು. ಎರಡೂ ಕುಟುಂಬಗಳ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು. ದಿವ್ಯಾಶ್ರೀ ಹಾಗೂ ಗೋವಿಂದೇ ಗೌಡರ ಮನೆಯಲ್ಲಿ ಮದುವೆ ಸಂಬಂಧ ಹುಡುಕುತ್ತಿದ್ದರು. ಇದೆ ವೇಳೆ ದಿವ್ಯಾ ತಂದೆ ತುಂಬಾ ಅನ್ಯೋನ್ಯವಾಗಿರುವ ಈ ಇಬ್ಬರಿಗೂ ಮದುವೆ ಮಾಡೋಣ ಅಂತ ನಿರ್ಧರಿಸಿ ಮದುವೆ ಮಾಡಿದ್ದರು.

 

 

ಗೋವಿಂದೇ ಗೌಡ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ನಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು. ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಅವಕಾಶ ಪಡೆದಿರುವ ಗೋವಿಂದೇ ಗೌಡ ಈಗ ತಂದೆಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಇನ್ನು ದಿವ್ಯಾಶ್ರೀ ಅವರು ಪುಣ್ಯಾತ್ ಗಿತ್ತೀಯರು ಚಿತ್ರದಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top