fbpx
ಸಮಾಚಾರ

ಅತ್ಯಂತ ಜನಪ್ರಿಯವಾದ “ಕಚ್ಚಾ ಬಾದಾಮ್” ಹಾಡಿನ ನಿಜವಾದ ಗಾಯಕ ಮತ್ತು ರಚನೆಕಾರ ಯಾರು? ಇಲ್ಲಿದೆ ನಿಜವಾದ ಸತ್ಯ!

ಭಾರತ ದೇಶವು ಪ್ರತಿಭಾವಂತರಿಂದ ಕೂಡಿದ ದೇಶವು. ಪ್ರತಿ ಮೂಲೆ ಮೂಲೆಯಲ್ಲೂ ಪ್ರತಿಭಾವಂತರು ಇರುತ್ತಾರೆ. ಆದರೆ ಅಂತ ಪ್ರತಿಭಾವಂತರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.

ನಮಗೆಲ್ಲರಿಗೂ ತಿಳಿದಿರುವಂತೆ ಸಾಮಾಜಿಕ ಜಾಲತಾಣಗಳಾದ “ಇನ್ಸ್ಟಾಗ್ರಾಮ್”, “ಫೇಸ್ಬುಕ್” ಮೂಲಕ ಅತ್ಯಂತ ಜನಪ್ರಿಯಗೊಂಡ ಹಾಡು ಎಂದರೆ ಅದೇ “ಕಚ್ಚಾ ಬಾದಾಮ್’.ಟಿವಿ ಸೆಲೆಬ್ರೆಟಿಗಳು, ಸಿನಿಮಾ ಸೆಲೆಬ್ರೆಟಿಗಳು ಮತ್ತು ಹಲವಾರು ಈ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ಹಾಡು ಭಾರತದಲ್ಲಷ್ಟೆಯಲ್ಲ ವಿದೇಶದಲ್ಲೂ ಜನಪ್ರಿಯವಾಗಿದೆ.

ಬೀದಿ ಬೀದಿಯಲ್ಲಿ ಕಡಲೆಕಾಯಿ ಮಾರಾಟ ಮಾಡುತ್ತಾ ತನ್ನ ಜೀವನನವನ್ನು ಸಾಗಿಸುತ್ತಿದ್ದ ಪಶ್ಚಿಮ ಬಂಗಾಳದ “ಭುಜನ್ ಬಡ್ಯಾಕರ್” ಅವರು ಈ ಹಾಡನ್ನು ಹಾಡಿದ್ದಾರೆ. ಅವರು ಹಾಡುತ್ತಿದ್ದ ಹಾಡನ್ನು ಯಾರೋ ವಿಡಿಯೋ ಮಾಡಿ ಅದನ್ನು ಯೌಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದರು. ಇಂದು ಆ ವಿಡಿಯೋ ಸಕತ್ ವೈರಲ್ ಆಗಿದೆ.

ಯೂರೋಪಿನ ಪ್ರಸಿದ್ಧ ಕಂಟೆಂಟ್ ಕ್ರಿಯೇಟರ್ ಆಗಿರುವ ಜಿಕಾ ಅವರು ತಮ್ಮ ಇಬ್ಬರು ಗೆಳೆಯರೊಂದಿಗೆ ಈ ಹಾಡಿಗೆ ನೃತ್ಯ ಮಾಡಿದ್ದೂ, ಈ ಹಾಡನ್ನು ಸುಮಾರು ೩ ಲಕ್ಷ ಜನರು ವೀಕ್ಷಿಸಿದ್ದು ೧ ಸಾವಿರಕ್ಕಿಂತಲೂ ಹೆಚ್ಚು ಲೈಕ್ ಬಂದಿದೆ.

“ಕಚ್ಚಾ ಬಾದಾಮ್’ ಹಾಡಿನ ಹಕ್ಕು ಮತ್ತು ಇತರೆಗಳ್ಯಾವುದೂ ಭುಜನ್ ಬಡ್ಯಾಕರ್ ಅವರ ಬಳಿ ಇಲ್ಲ. ಆದರೆ ಕೆಲವರು ಅವರ ಹಾಡನ್ನು ಮೂಲವಾಗಿರಿಸಿಕೊಂಡು ಹಾಡನ್ನು ರಚಿಸಿ ಯೌಟ್ಯೂಬ್ ನಲ್ಲಿ ಬಹಳಷ್ಟು ಹಣ ಸಂಪಾದನೆ ಮಾಡುತ್ತಿದ್ದಾರೆ. ಇದರ ಬಗ್ಗೆ ಭುಜನ್ ಬಡ್ಯಾಕರ್ ಅವರ ಬಳಿ ಕೇಳಿದಾಗ ಅವರು, ಅದರ ಬಗ್ಗೆ ನನಗೆ ಯಾವುದೇ ಬೇಸರವಿಲ್ಲಾ ಮತ್ತು ನನ್ನ ಹಾಡು ಕೇಳಿ ಜನರು ಖುಷಿಯಾಗಿ ಇದ್ದಾರಲ್ಲ ಅಷ್ಟೇ ಸಾಕು ಎಂದು ಉತ್ತರಿಸಿದರು.

ಈ ಹಾಡನ್ನು ಭುಜನ್ ಅವರೇ ರಚಿಸಿ ಹಾಡಿದ್ದಾರೆ. ಭುಜನ್ ಅವರು “ಕಚ್ಚಾ ಬಾದಾಮ್’ ಹಾಡನ್ನು ಹಾಡುತ್ತಿರುವ ವಿಡಿಯೋ ನವೆಂಬರ್ ತಿಂಗಳಲ್ಲೇ ಯೌಟ್ಯೂಬ್ ಅಲ್ಲಿ ಅಪ್ಲೋಡ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top