ಗಾನ ಕೋಗಿಲೆ ಎಂದೇ ಪ್ರಖ್ಯಾತರಾಗಿರುವ ಲತಾ ಮಂಗೇಶ್ಕರ್ ಅವರು ಇಂದು ನಮಗೆ ನೆನಪು ಮಾತ್ರ. ಬಹು ಅಂಗಾಗದ ವೈಫಲ್ಯದಿಂದ 29 ದಿನಗಳ ಜೀವನ್ಮರಣ ಹೋರಾಟದಲ್ಲಿ, ಮುಂಬೈ ನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಫೆಬ್ರವರಿ 6 ರಂದು ಕೊನೆ ಉಸಿರೆಳೆದರು.
92 ವರ್ಷದ ಗಾಯಕಿ ಕೊರೊನ ಸೋಂಕಿಗೆ ತುತ್ತಾಗಿ ಆಸ್ಪತ್ರೆ ದಾಖಲಾಗಿದ್ದರು. ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಡಾ. ಪ್ರತಿನ್ ಸಮದಾನಿ ಅವರ ತಂಡ ಲತಾರಿಗೆ ಚಿಕಿತ್ಸೆ ನೀಡುತ್ತಿದ್ದರು. “ಲತಾ ಮಂಗೇಶ್ಕರ್ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಲಾಯಿತು. ನಾವು ಪಣತೊಟ್ಟಿದ್ದೇವು. ಆದರೆ ನಾವು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ದೀದಿಯ ಮುಖದಲ್ಲಿ ಉಳಿದಿದ್ದ ನಗುವನ್ನು ನಾನು ಎಂದಿಗೂ ಮರೆಯುವುದಿಲ್ಲ” ಎಂದು ಹೇಳಿ ಕಣ್ಣೀರು ಹಾಕಿದ್ದರು.
Lata didi in her last days 😥 #LataMangeshkar @MarathiRT @SuyogMarathi @OfficeOfPunekar pic.twitter.com/sOfgr7NcYh
— Suyog Events (@SuyogEvents) February 6, 2022
ಡಾ. ಪ್ರತೀತ್ ಸಮದಾನಿ ಅವರು “ನಾನು ಅವರಿಗೆ ಚಿಕಿತ್ಸೆ ನೀಡಲು ಪ್ರಾರಂಭಿಸಿದಾಗಿನಿಂದ ಲತಾ ಅವರ ಸ್ವಭಾವದಿಂದ ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಅವರು ತುಂಬಾ ತೃಪ್ತಿ ಹೊಂದಿದ್ದರು. ಅವರು ಯಾವುದೇ ಚಿಕಿತ್ಸೆಯನ್ನು ನಿರಾಕರಿಸಲಿಲ್ಲ. ಅವರು ಎಲ್ಲರಿಗೂ ಸಮಾನ ಚಿಕಿತ್ಸೆ ನೀಡಬೇಕೆಂದು ಒತ್ತಾಯಿಸಿದರು. ಅವರ ಮುಖದಲ್ಲಿ ಯಾವಾಗಲೂ ಮಸುಕಾದ ನಗು ಇತ್ತು, ಅದು ಕೊನೆಯವರೆಗೂ ಇತ್ತು, ನಾನು ಅದನ್ನು ಎಂದಿಗೂ ಮರೆಯುವುದಿಲ್ಲ, ”ಎಂದು ಹೇಳಿದ್ದರು.
ಇತ್ತೀಚಿನ ದಿನಗಳಲ್ಲಿ ಲತಾ ಮಂಗೇಶ್ಕರ್ ಅವರ ಅರೋಗ್ಯ ಸ್ಥಿತಿ ಬಹಳ ಹದಗೆಟ್ಟಿತ್ತು. ಎರಡು ವರ್ಷಗಳ ಹಿಂದೆ ಅನಾರೋಗ್ಯದ ಕಾರಣದಿಂದ ಆಸ್ಪತ್ರೆ ಸೇರಿ ೨೮ ದಿನಗಳ ಚಿಕಿತ್ಸೆ ಪಡೆದು ಮನೆಗೆ ತೆರಳಿದರು. ನಂತರ ಅವರು ಜನವರಿ 8 ರಂದು ಕೊರೊನ ಸೋಂಕಿಗೆ ಒಳಗಾದರು. ನಂತರ ಅವರು ನಿಮೋನಿಯಾಗೆ ತುತ್ತಾದರು. ನಂತರ ಬಹು ಅಂಗಾಗದ ವೈಫಲ್ಯದಿಂದ ನಮ್ಮನ್ನು ಅಗಲಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
