fbpx
ಸಮಾಚಾರ

ಹೊಸ ಮೆಟ್ರೋ ನಿಲ್ದಾಣಕ್ಕೆ ‘ಪುನೀತ್​’ ಹೆಸರು?

ಪುನೀತ್ ರಾಜ್‍ಕುಮಾರ್ ನಮ್ಮಿಂದ ದೈಹಿಕವಾಗಿ ದೂರವಾಗಿ 3 ತಿಂಗಳು ಕಳೆದ್ರೂ ಇಂದಿಗೂ ಕೋಟ್ಯಂತರ ಮನಗಳು ಪುನೀತ್‍ಗಾಗಿ ಮಿಡಿಯುತ್ತಿವೆ. ಪುನೀತ್ ಅಗಲಿದ ಬಳಿಕ ಪ್ರತಿಮೆ ಸ್ಥಾಪನೆ ಮಾಡಿದ್ದು ಆಯ್ತು, ನೂರಾರು ಸಮಾಜ ಸೇವೆ ಮಾಡಿದ್ದೂ ಆಯ್ತು. ಇದೀಗ ಬೆಂಗಳೂರಿನ ಪುಲಕೇಶಿ ನಗರದ ಪಾಟರಿ ರಸ್ತೆಯಲ್ಲಿರೋ ಫೆದರ್ ಲೈಟ್ ಶಾಲೆ ಬಳಿ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗ್ತಿದ್ದು, ಇದಕ್ಕೆ ಅಪ್ಪು ಹೆಸರಿಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು ಐತಿಹಾಸಿಕ ಮೆಟ್ರೋ ಸ್ಟೆಷನ್​ಗೆ ಪುನೀತ್​ ರಾಜ್​ ಕುಮಾರ್​ ಹೆಸರು ನಾಮಕರಣ ಮಾಡುವಂತೆ ಕರ್ನಾಟಕ ಬಹುಜನ ಫೆಡರೇಷನ್​ ಪ್ರಧಾನಿ ಕಚೇರಿಗೆ ಪತ್ರ ಬರೆದಿತ್ತು. ಇದೀಗ ಅವರ ಪತ್ರಕ್ಕೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರವೇ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ.

ಈ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಕಚೇರಿಯಿಂದ ನಿರ್ದೇಶನ ನೀಡಲಾಗಿದೆ. ಎಲ್ಲಾ ನಿರೀಕ್ಷೆಯಂತಾದ್ರೆ ಶೀಘ್ರವೇ ಸರ್ಕಾರದಿಂದಲೂ ಈ ಬಗ್ಗೆ ಘೋಷಣೆ ಹೊರ ಬೀಳಲಿದೆ. ಪ್ರಧಾನಿ ಕಚೇರಿಯಿಂದ ನಿರ್ದೇಶನ ಬಂದ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಸಹ ಸೂಕ್ತ ಸಲಹೆಗೆ ನಿರ್ದೇಶನ ನೀಡಿದ್ದಾರೆ. ಅದಷ್ಟು ಬೇಗ ನಿರ್ಮಾಣ ಹಂತದ ಪಾಟರಿ ಟೌನ್ ಮೆಟ್ರೋಗೆ ಅಪ್ಪು ಹೆಸರಿಡಲಾಗುತ್ತೆ ಎಂದು ಹೇಳಲಾಗ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top