fbpx
ಸಮಾಚಾರ

ಚಿಲ್ಲರೆ ಇಲ್ಲ ಅನ್ನೋ ಹಾಗಿಲ್ಲ: PhonePe ಮೂಲಕ ಹಣವನ್ನು ಸ್ವೀಕರಿಸುತ್ತಾನೆ ಡಿಜಿಟಲ್ ಭಿಕ್ಷುಕ

ಇತ್ತೀಚಿನ ದಿನಗಳಲ್ಲಿ ಜನರು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದರೆ. ನಗದು ರಹಿತ ವಹಿವಾಟಿಗೆ ಜನರು ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ. ಈ ಬದಲಾವಣೆಯನ್ನು ಉಪಗೋಗಿಸಿಕೊಂಡು ಬಿಹಾರದ ಭಿಕ್ಷುಕ ಈಗ ಡಿಜಿಟಲ್ ಸೇವೆಯ ಮೂಲಕ ಡಿಜಿಟಲ್ ಪಾವತಿಯನ್ನು ಸ್ವೀಕರಿಸುತ್ತಿದಾನೆ.

ಈತನ ಹೆಸರು ರಾಜು ಪಟೇಲ್. ಈತನ ವಯಸ್ಸು ೪೦ ವರ್ಷ.ಈತ ಬೆಟ್ಟಿಯಾ ರೈಲ್ವೆ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಾನೆ. ಇವನು ತನ್ನ ಕತ್ತಿಗೆ ಸ್ಕ್ಯಾನಿಂಗ್ ಕೋಡ್ ಅನ್ನು ಹಾಕಿಕೊಂಡು ಭಿಕ್ಷೆ ಬೇಡುವುದು ವಿಶೇಷವಾಗಿದ್ದು ಮತ್ತು ಇವನು ಭಿಕ್ಷೆಯನ್ನು ಆನ್ಲೈನ್ ಮೂಲಕವೇ ಪಾವತಿಸಬೇಕೆಂದು ಕೋರುತ್ತಾನೆ.

ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ರಾಜು ಪಟೇಲ್ ” ನಾನು ಡಿಜಿಟಲ್ ಪಾವತಿಯನ್ನು ಸ್ವೀಕರಿಸುತ್ತೇನೆ. ನನ್ನ ಹೊಟ್ಟೆಯನ್ನು ತುಂಬಿಸಲು ಅಷ್ಟು ಸಾಕು. ನಾನು ನನ್ನ ಬಾಲ್ಯದಿಂದಲೂ ಇಲ್ಲಿ ಭಿಕ್ಷೆ ಬೇಡುತ್ತಿದ್ದೆ ಆದರೆ ಈ ಡಿಜಿಟಲ್ ಯುಗದಲ್ಲಿ ನನ್ನ ಭಿಕ್ಷಾಟನೆಯ ವಿಧಾನವನ್ನು ಬದಲಾಯಿಸಿಕೊಂಡಿದ್ದೇನೆ” ಎಂದು ಹೇಳಿದನು.

ಈತ ಭಿಕ್ಷೆ ಬೇಡಿಕೊಂಡು ನಿಲ್ಡಾಣದಲ್ಲೇ ಮಲಗುತ್ತಾನೆ. ಜೀವನೋಪಾಯಕ್ಕೆ ಬೇರೆ ದಾರಿಯೇ ಕಾಣಲಿಲ್ಲ ಎಂದು ಹೇಳಿದರು. ಇತ್ತೀಚಿನ ದಿನದಲ್ಲಿ ಜನರು ಚಿಲ್ಲರೆ ಸಮಸ್ಯೆಯ ಕಾರಣ ಭಿಕ್ಷೆ ನೀಡಲು ನಿರಾಕರಿಸುತ್ತಾರೆ. ಭಿಕ್ಷೆ ಕೇಳಿದರೆ ಚಿಲ್ಲರೆ ಇಲ್ಲ ಎಂದು ಕಳುಹಿಸುತ್ತಿದ್ದರು. ಅದಕ್ಕಾಗಿ ನಾನು ಇಂತಹ ಐಡಿಯಾ ವನ್ನು ಉಪಯೋಗಿಸಿದೆ ಎಂದು ಅವರು ತಿಳಿಸಿದರು. ಇದೇ ಕಾರಣಕ್ಕಾಗಿ ಈತ ಬ್ಯಾಂಕ್ ಖಾತೆ ಮತ್ತು ಇ- ವಾಲೆಟ್ ಅನ್ನು ತೆರೆದಿದ್ದಾನೆ. ಈಗ ಕೆಲವು ಜನರು ನಗದು ರೂಪದಲ್ಲಿ ಭಿಕ್ಷೆಯನ್ನು ನೀಡಿದರೆ ಕೆಲವರು ಆನ್ಲೈನ್ ಪೇಮೆಂಟ್ ಮೂಲಕ ಭಿಕ್ಷೆಯನ್ನು ನೀಡುತ್ತಾರೆ ಎಂದು ಆತ ಹೇಳಿದನು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top