fbpx
ಸಮಾಚಾರ

ಟಿಕ್ ಟಾಕ್ ಸ್ಟಾರ್ ಕಮಲಜ್ಜಿ ನಿಧನ

ಟಿಕ್ ಟಾಕ್ ವಿಡಿಯೋಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಸ್ಟಾರ್ ಕಮಲಜ್ಜಿ ಎಂತಲೇ ಸಕತ್ ಫೇಮಸ್ ಆಗಿದ್ದ ಕಮಲಜ್ಜಿ ಯಾನೆ ಕಮಲ ಅವರು ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕಮಲಜ್ಜಿ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೆನ್ನೆ ಆಸ್ಪತ್ರೆಯಲ್ಲಿಯೇ ನಿಧನಗೊಂಡಿದ್ದಾರೆ.

ಟಿಕ್​ಟಾಕ್​, ಇನ್​ಸ್ಟಾಗ್ರಾಂನಲ್ಲಿ ಸಾಕಷ್ಟು ವಿಡಿಯೋಗಳ ಮೂಲಕ ಮನೆಮಾತಾಗಿದ್ದ 84 ವರ್ಷದ ಕಮಲಜ್ಜಿ, ತಮ್ಮ ಮೊಮ್ಮಕ್ಕಳ ಜೊತೆ ರೀಲ್ಸ್​ ಮಾಡಿ ನಗುವಿನ ಹೊಳೆಯನ್ನು ಹರಿಸುತ್ತಿದ್ದರು. ಮೊಮ್ಮಗನಾದ ಧನು ಆಚಾರ್​ ಜೊತೆಗೂಡಿ ಅಜ್ಜಿ ಸಾಕಷ್ಟು ರೀಲ್ಸ್​ಗಳನ್ನು ಮಾಡಿದ್ದಾರೆ. ತರಹೇವಾರಿ ರೀಲ್ಸ್​ಗಳಿಗೆ ಇವರು ನೀಡುವ ಎಕ್ಸ್​ಪ್ರೇಶನ್​ಗಳು, ಸಾಕಷ್ಟು ಜನರನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿತ್ತು.

ಟಿಕ್ ಟಾಕ್ ಸ್ಟಾರ್ ಧನರಾಜ್ ಜೊತೆ ಕಮಲಜ್ಜಿ 50ಕ್ಕೂ ಅಧಿಕ ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದು, ಇವರ ಕುಟುಂಬವೇ ಟಿಕ್ ಟಾಕ್ ಫ್ಯಾಮಿಲಿ ಎಂದು ಹೆಸರು ಪಡೆದಿತ್ತು. ತಮ್ಮ ಇಳಿವಯಸ್ಸಿನಲ್ಲೂ ಇವರು ಟಿಕ್ ಟಾಕ್ ವಿಡಿಯೋಗಳಲ್ಲಿ ತೋರುತ್ತಿದ್ದ ಅಭಿನಯ, ಮಾತಿನ ವೇಗ, ಮನೆಮಂದಿಯ ಜೊತೆ ಬೆರೆಯುತ್ತಿದ್ದ ದೃಶ್ಯಾವಳಿಗಳಿಂದಾಗಿ ತಮ್ಮದೇ ಆದ ಅಭಿಮಾನಿ ವರ್ಗವನ್ನು ಅವರು ಪಡೆದಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published.

To Top