ಇತ್ತೀಚಿನ ದಿನಗಳಲ್ಲಿ ಹಿಜಾಬ್ ವಿವಾದವು ಬಹಳಷ್ಟು ಸುದ್ದಿಯಾಗುತ್ತಿರುವುದು ನಮಗೆಲ್ಲರಿಗೂ ಗೊತ್ತಿದೆ. ಈಗ ಈ ವಿವಾದದ ಕುರಿತು ನಟಿ ಸಂಸದೆ ‘ರಮ್ಯಾ’ ಅವರು ಪ್ರತಿಕ್ರಯಿಸಿದ್ದಾರೆ.
ಹಿಜಾಬ್ ಮತ್ತು ಕೇಸರಿ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ರಮ್ಯಾ ಅವರು, ಭಾರತದ ಯುವ ಜನತೆ ಧರ್ಮದ ಹೆಸರಿನಲ್ಲಿ ವಿಭಜನೆ ಯಾಗುತ್ತಿರುವುದು ನೋಡಿದರೆ ಮನಸ್ಸಿಗೆ ನೋವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.
— Divya Spandana/Ramya (@divyaspandana) February 9, 2022
ಕಾಲೇಜು ಆವರಣದಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳ ನಡುವೆ ಆಗುತಿದ್ದ ಪ್ರತಿಭಟನೆಯ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಮತ್ತೊಂದು ಸ್ಟೋರಿಯಲ್ಲಿ ಅವರು ” ನಾವು ಶಾಲೆ, ಕಾಲೇಜು ಹೋಗುತ್ತಿದ್ದ ಸಮಯದಲ್ಲಿ ನಮ್ಮ ಮುಂದೆ ನಿಂತಿರುವ ವ್ಯಕ್ತಿ ಕ್ರೈಸ್ತ ಧರ್ಮದವರೋ, ಹಿಂದೂ ಧರ್ಮದವರೋ ಅಥವಾ ಮುಸಲ್ಮಾನ ಧರ್ಮದವರೋ ಎಂಬುದು ನಮಗೆ ತಿಳಿದಿರಲಿಲ್ಲ. ಯಾರು ಊಟಕ್ಕೆ ಇವತ್ತು ಒಳ್ಳೆ ಲಂಚ್ ಬಾಕ್ಸ್ ತಂದಿದ್ದಾರೆ, ಯಾರು ಆಟ ಆಡುವಾಗ ಚಂಡನ್ನು ದೂರ ಎಸೆಯುತ್ತಾರೆ, ಪುಸ್ತಕದ ಬದನೆಕಾಯಿ ಯಾರು ಮತ್ತು ಯಾರಿಗೆ ಯಾರ ಮೇಲೆ ಕ್ರಶ್ ಆಗಿದೆ ಇಂತಹ ವಿಷಯಗಳು ಮಾತ್ರ ತಿಳಿದುಕೊಂಡಿದ್ದೆವು. ಆದರೆ ಇಂತಹ ನಾನ್ ಸೆನ್ಸ್ ಎಲ್ಲಿಂದ ಶುರುವಾಯಿತು” ಎಂದು ಬರೆದುಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
